ಕಾರವಾರ;ಯಲ್ಲಾಪುರದ ಆರತಿಬೈಲ್ ಘಟ್ಟದಲ್ಲಿ ನಡೆದ ಅಪಘಾತದಲ್ಲಿ ಏಳು ಯುವಕರು ಮೃತಪಟ್ಟ ದುರಂತ ಆಘಾತವನ್ನು ಉಂಟುಮಾಡಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ತಿಳಿಸಿದ್ದಾರೆ.
ಈ ಅಪಘಾತದಲ್ಲಿ ಧಾರವಾಡ ಜಿಲ್ಲೆಯ ಯುವಕರು ಪ್ರಾಣ ಕಳೆದುಕೊಂಡಿದ್ದಾರೆ. ಇದೊಂದು ತುಂಬಾ ನೋವಿನ ಸಂಗತಿಯಾಗಿದೆ.
ಸಂತ್ರಸ್ಥ ಕುಟುಂಬಕ್ಕೆ ಸಹಾಯ ಹಾಗೂ ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ದೊರಕಿಸಿಕೊಡಬೇಕು ಎಂದು ರೂಪಾಲಿ ಎಸ್.ನಾಯ್ಕ ಆಗ್ರಹಿಸಿದ್ದಾರೆ.
ಯಲ್ಲಾಪುರ ಅಪಘಾತಃ ಆಘಾತ ವ್ಯಕ್ತಪಡಿಸಿದ ರೂಪಾಲಿ ಎಸ್.ನಾಯ್ಕ
