ಕಾರವಾರ: ರಾಜ್ಯ ಅರಣ್ಯ ಇಲಾಖೆಯಲ್ಲಿ ನಡೆದ ಪ್ರಮುಖ ಆಡಳಿತಾತ್ಮಕ ಬದಲಾವಣೆಯಲ್ಲಿ ಒಟ್ಟು 40 ವಲಯ ಅರಣ್ಯಾಧಿಕಾರಿಗಳನ್ನು (ಆರ್ಎಫ್ಒ) ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದ್ದು, ಇದರಲ್ಲಿ ಉತ್ತರ ಕನ್ನಡ ಜಿಲ್ಲೆಯೊಂದರಲ್ಲೇ ದಾಖಲೆಯ 19 ಅಧಿಕಾರಿಗಳು ವರ್ಗಾವಣೆಗೊಂಡಿದ್ದಾರೆ..
ಜಿಲ್ಲೆಯ ಶಿರಸಿ ವಿಭಾಗದ ಪ್ರಮುಖ ವಲಯಗಳಾದ ಗಿರೀಶ ನಾಯ್ಕ ಅವರನ್ನು ಹುಲೇಕಲ್ ನೂತನ ಆರ್ಎಫ್ಒ ಆಗಿ, ಶಿವಾನಂದ ನಿಂಗಾಣಿ ಅವರನ್ನು ಕ್ಯಾದಗಿಗೂ, ಉಷಾ ಕಬ್ಬೇರ ಅವರನ್ನು ಸಿದ್ದಾಪುರಕ್ಕೂ ಹಾಗೂ ಭವ್ಯಾ ನಾಯ್ಕ ಅವರನ್ನು ಶಿರಸಿ ವಲಯಕ್ಕೂ ನಿಯೋಜಿಸಲಾಗಿದೆ. ಉಳಿದಂತೆ ಕಾರ್ತಿಕ ಕಾಂಬಳೆ (ಬನವಾಸಿ), ಮಾರುತಿ ನಾಯ್ಕ (ಮಂಚಿಕೇರಿ), ಬಸವರಾಜ ಬೋಜಳ್ಳಿ (ಇಡಗುಂದಿ) ಮತ್ತು ಎಂ.ಎಚ್. ನಾಯ್ಕ (ಯಲ್ಲಾಪುರ) ಹೊಸ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಜಿ.ವಿ. ನರೇಶ್ ಅವರನ್ನು ಬಂಡಿಪುರಕ್ಕೆ ವರ್ಗಾಯಿಸಲಾಗಿದೆ.
ಕರಾವಳಿ ಹಾಗೂ ದಾಂಡೇಲಿ ಭಾಗದಲ್ಲೂ ವ್ಯಾಪಕ ಬದಲಾವಣೆಯಾಗಿದ್ದು, ಪ್ರೀತಿ ನಾಯ್ಕ (ಹೊನ್ನಾವರ ಸಾಮಾಜಿಕ ಅರಣ್ಯ), ಸುರೇಶ್ ನಾಯಕ (ಹೀರೇಗುತ್ತಿ), ಪ್ರಮೋದ ನಾಯಕ (ಹೊನ್ನಾವರ) ಮತ್ತು ಸವಿತಾ ದೇವಾಡಿಗ (ಕುಮಟಾ) ನಿಯೋಜನೆಗೊಂಡಿದ್ದಾರೆ. ಜಿಲ್ಲೆಯಿಂದ ಹೊರಗೆ ಎಸ್.ವಿ. ಬಂಟರು ಚಿಕ್ಕಬಳ್ಳಾಪುರಕ್ಕೆ ಹಾಗೂ ಪ್ರವೀಣ ನಾಯಕ ದಾಂಡೇಲಿ ಡಿಪೋಗೆ ಸ್ಥಳಾಂತರಗೊಂಡಿದ್ದಾರೆ. ಇನ್ನುಳಿದಂತೆ ಎನ್.ಎಲ್. ನದಾಫ (ಹಳಿಯಾಳ), ಬಸವರಾಜ ಪಣಸೋಲಿ (ವನ್ಯಜೀವಿ ವಿಭಾಗ) ಹಾಗೂ ರವಿಕಿರಣ ಸಂಪಗಾವಿ (ಜೊಯಿಡಾ) ವಲಯಕ್ಕೆ ವರ್ಗಾವಣೆಗೊಂಡಿದ್ದಾರೆ.
ವರ್ಗಾವಣೆಗೊಂಡ ಎಲ್ಲಾ ಅಧಿಕಾರಿಗಳು ವಿಳಂಬ ಮಾಡದೇ ತಕ್ಷಣವೇ ನೂತನ ಸ್ಥಳಗಳಲ್ಲಿ ಅಧಿಕಾರ ಸ್ವೀಕರಿಸಿ, ಇ-ಮೇಲ್ ಮೂಲಕ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುವಂತೆ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ನಿಗದಿತ ಅವಧಿಯಲ್ಲಿ ಕರ್ತವ್ಯಕ್ಕೆ ಹಾಜರಾಗದಿದ್ದರೆ ಶಿಸ್ತು ಕ್ರಮ ಜರುಗಿಸುವುದಾಗಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಎಚ್ಚರಿಸಿದೆ.
ವರ್ಗಾವಣೆಯಾದ ಅಧಿಕಾರಿಗಳು ತಕ್ಷಣ ಹಾಜರಾಗಲು ಸೂಚನೆ!
