ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Uttara-Kannada

ಜನಪ್ರಿಯ ವೈದ್ಯನಿಗೆ ಅನಾಮಧೇಯ ಕಂಟಕ!                              

Pakka News Web • 2 ಆಗಸ್ಟ್ 2026,

ಬಡವರ ಪಾಲಿನ ‘ಸಂಜೀವಿನಿ’ ಎನಿಸಿಕೊಂಡಿರುವ ತಾಲೂಕು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಅರುಣ್ ಕುಮಾರ್ ವಿರುದ್ಧ ವಾಟ್ಸಾಪ್‌ನಲ್ಲಿ ಹರಿದಾಡಿರುವ ಅನಾಮಧೇಯ ದೂರು ಈಗ ಭಟ್ಕಳದಲ್ಲಿ ಭಾರಿ ಸಂಚಲನ ಮೂಡಿಸಿದೆ.

ಹಗಲಿರುಳೆನ್ನದೆ ರೋಗಿಗಳ ಸೇವೆಗೆ ಸ್ಪಂದಿಸಿ, 2023–24ನೇ ಸಾಲಿನ ಅತ್ಯುತ್ತಮ ವೈದ್ಯ ಪ್ರಶಸ್ತಿ ಪಡೆದಿದ್ದಲ್ಲದೆ, ಆಸ್ಪತ್ರೆಯನ್ನು ಆಯುಷ್ಮಾನ್ ಭಾರತ್ ಯೋಜನೆಯ ರಾಜ್ಯಮಟ್ಟದ ಶ್ರೇಯಾಂಕದಲ್ಲಿ 37ನೇ ಸ್ಥಾನಕ್ಕೇರಿಸಿದ ವೈದ್ಯರ ವಿರುದ್ಧದ ಈ ನಡೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಾಮಾಣಿಕ ಅಧಿಕಾರಿಯ ವಿರುದ್ಧ ಸುಳ್ಳು ದೂರು ನೀಡಿ ಅಪಪ್ರಚಾರ ನಡೆಸಿದ ಗೂಢಚರರನ್ನು ತಕ್ಷಣ ಪತ್ತೆಹಚ್ಚಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಯಾವುದೇ ಕಾರಣಕ್ಕೂ ವೈದ್ಯರ ವಿರುದ್ಧ ಏಕಪಕ್ಷೀಯ ಕ್ರಮ ಕೈಗೊಳ್ಳಬಾರದು, ತಪ್ಪಿದರೆ ಬೀದಿಗಿಳಿದು ಉಗ್ರ ಪ್ರತಿಭಟನೆ ನಡೆಸುವುದಾಗಿ ಮಾಜಿ ಸೈನಿಕ ಶ್ರೀಕಾಂತ ನಾಯ್ಕ, ಎನ್.ಡಿ. ಖಾರ್ವಿ, ವಿಶ್ವನಾಥ ಮಾಹಲೆ ಸೇರಿದಂತೆ ಸ್ಥಳೀಯ ನಾಗರಿಕರು ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250