ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Uttara-Kannada

ರೈತರಿಗೆ ಸಿಹಿಸುದ್ದಿ: ಬೆಳೆ ವಿಮೆ ಗಡುವು ವಿಸ್ತರಣೆ

Pakka News Web • 4 ಆಗಸ್ಟ್ 2026,

ಕಾರವಾರ:ಉತ್ತರ ಕನ್ನಡ ಜಿಲ್ಲೆಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆಯಡಿ 2026-27 ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಭತ್ತ, ಮುಸುಕಿನ ಜೋಳ, ಹಾಗೂ ಹತ್ತಿ ಬೆಳೆಗಳಿಗೆ ಇಪ್ಕೋ ಟೋಕಿಯೋ ಜನರಲ್ ಇನ್ನೂರನ್ಸ್ ಕಂಪನಿಯಿಂದ ವಿಮಾ ಸೌಲಭ್ಯ ದೊರೆಯಲಿದೆ.
ಮೆಕ್ಕೆಜೋಳ ಹಾಗೂ ಹತ್ತಿ ಬೆಳೆಗಳಿಗೆ ವಿಮೆ ನೊಂದಾಯಿಸಿಕೊಳ್ಳಲು ಬೆಳೆ ಸಾಲ ಪಡೆದ ರೈತರಿಗೆ ಮಾತ್ರ ಅಂತಿಮ ದಿನಾಂಕ ವಿಸ್ತರಿಸಲಾಗಿದ್ದು, ಆಗಸ್ಟ್ 7 ರವರೆಗೆ ವಿಮೆ ನೊಂದಾಯಸಿಕೊಳ್ಳಲು ಅವಕಾಶವಿರುತ್ತದೆ. ಭತ್ತದ ಬೆಳೆಗೆ ವಿಮೆ ನೊಂದಾಯಿಸಿಕೊಳ್ಳಲು ಬೆಳೆ ಸಾಲ ಪಡೆದ ರೈತರು ಹಾಗೂ ಪಡೆಯದ ರೈತರಿಗೆ ಆಗಸ್ಟ್ 14 ಅಂತಿಮ ದಿನಾಂಕವಾಗಿರುತ್ತದೆ.
ರೈತರು ಪ್ರೋಟ್ ಐಡಿ, ಆಧಾರ ಕಾರ್ಡ, ಬ್ಯಾಂಕ್ ಪಾಸ್ ಬುಕ್ ಪ್ರತಿ, ಪಹಣಿಯ ಪ್ರತಿಗಳ ಜೊತೆ ತಮ್ಮ ಹತ್ತಿರದ ರಾಷ್ಟ್ರೀಕೃತ ಬ್ಯಾಂಕ್, ವ್ಯವಸಾಯ ಸೇವಾ ಸಹಕಾರಿ ಸಂಘ, ಸಾಮಾನ್ಯ ಸೇವಾ ಕೇಂದ್ರ, ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ಬೆಳೆ ವಿಮ ನೊಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಕೃಷಿ ಇಲಾಖೆ ಅಥವಾ ಟೋಲ್ ಪ್ರೀ ಸಂಖ್ಯೆ 1800 103 5490 ಸಂಪರ್ಕಿಸಬಹುದು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250