ಬನವಾಸಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಬದನಗೂಡು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ನಟರಾಜ್ B. ಹೊಸೂರು ಹಾಗೂ ರಾಜೇಂದ್ರ ಗೌಡರಿಗರ ಕರ್ನಾಟಕ ಉಚ್ಚ ನ್ಯಾಯಾಲಯವು ಮಧ್ಯಂತರ ತಡೆಯಾಜ್ಞೆ ನೀಡಿ ಮಹತ್ವದ ಆದೇಶ ಹೊರಡಿಸಿದೆ.
ಬನವಾಸಿ ಪೊಲೀಸ್ ಠಾಣೆಯಲ್ಲಿ ಜಗದೀಶ್ ಮುರುಗಣ್ಣನವರ್ ಎನ್ನುವವರು ನೀಡಿದ ದೂರಿನ ಆಧಾರದ ಮೇಲೆ ನಟರಾಜ್ B. ಹೊಸೂರು ಹಾಗೂ ಇತರ ಇಬ್ಬರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಆದರೆ, ಈ ಪ್ರಕರಣವು ತೀರಾ ಸುಳ್ಳಿನಿಂದ ಕೂಡಿದ್ದು, ರಾಜಕೀಯ ದುರುದ್ದೇಶದಿಂದ ತಮಗೆ ಕಿರುಕುಳ ನೀಡುವ ಸಲುವಾಗಿಯೇ ಹೂಡಲಾಗಿದೆ ಎಂದು ಆರೋಪಿಸಿ, ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ನಟರಾಜ್ B. ಹೊಸೂರು ಮತ್ತು ರಾಜೇಂದ್ರ ಗೌಡ ಉಚ್ಚ ನ್ಯಾಯಾಲಯದ ಬಾಗಿಲು ತಟ್ಟಿದ್ದರು.

ಈ ಕುರಿತು ಸುದೀರ್ಘ ವಿಚಾರಣೆ ನಡೆಸಿದ ಮಾನ್ಯ ಹೈಕೋರ್ಟ್, ಅರ್ಜಿದಾರರ ವಾದವನ್ನು ಪುರಸ್ಕರಿಸಿ ದಿನಾಂಕ 04.08.2026 ರಂದು ಮಧ್ಯಂತರ ಆದೇಶ ಹೊರಡಿಸಿದ್ದು, ಪ್ರಕರಣದ ಮುಂದಿನ ನಡಾವಳಿಗಳಿಗೆ ತಡೆಯಾಜ್ಞೆ ನೀಡಿದೆ.

ಅರ್ಜಿದಾರರಾದ ನಟರಾಜ್ B. ಹೊಸೂರು ಮತ್ತು ರಾಜೇಂದ್ರ ಗೌಡ್ರ ಪರವಾಗಿ ಹೈಕೋರ್ಟ್‌ನ ಹಿರಿಯ ವಕೀಲರಾದ ಎ. ಪಿ. ಹೆಗಡೆ ಜಾನ್ಮನೆ ಅವರು ನ್ಯಾಯಾಲಯದಲ್ಲಿ ಪ್ರಬಲವಾಗಿ ವಾದ ಮಂಡಿಸಿದ್ದರು. ಹೈಕೋರ್ಟ್ ನೀಡಿದ ಈ ತಡೆಯಾಜ್ಞೆ ಆದೇಶದಿಂದಾಗಿ ಅರ್ಜಿದಾರರಿಗೆ ದೊಡ್ಡ ಮಟ್ಟದ ಕಾನೂನು ನೈತಿಕ ಜಯ ಸಿಕ್ಕಂತಾಗಿದೆ.
