ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Uttara-Kannada

ಸಚಿವ ಲಕ್ಷ್ಮಣ್ ಸವದಿ ಅವರನ್ನು ಭೇಟಿಯಾದ ಸೈಯದ್ ಅಶ್ರಫ್ ಖಾದ್ರಿ

Pakka News Web • 6 ಆಗಸ್ಟ್ 2026,

ಕಾರವಾರ: ಜಿಲ್ಲೆಗೆ ಮೊದಲ ಸಲ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅವರನ್ನು ಕಾಂಗ್ರೆಸ್ ಸಾಮಾಜಿಕ ಜಾಲತಾಣದ ರಾಜ್ಯ ಸಂಯೋಜಕರಾದ ಸೈಯದ್ ಅಶ್ರಫ್ ಖಾದ್ರಿ ಅವರನ್ನು ಇಲ್ಲಿನ ಸರ್ಕ್ಯೂಟ್ ಹೌಸ್‌ ನಲ್ಲಿ ಭೇಟಿಯಾಗಿ, ಕಾರವಾರಕ್ಕೆ ಆತ್ಮೀಯವಾಗಿ ಬರಮಾಡಿಕೊಂಡರು.

ಸೌಹಾರ್ದಯುತವಾಗಿ ನಡೆದ ಈ ಭೇಟಿಯ ವೇಳೆ, ಜಿಲ್ಲೆಯಲ್ಲಿ ಪ್ರಸ್ತುತ ಯುವ ಕಾಂಗ್ರೆಸ್‌ನ ಸ್ಥಿತಿಗತಿಗಳು ಹಾಗೂ ಪ್ರಚಲಿತ ಚಟುವಟಿಕೆಗಳ ಕುರಿತು ಸಚಿವರು ಸೈಯದ್ ಅಶ್ರಫ್ ಖಾದ್ರಿ ಅವರಿಂದ ವಿವರವಾದ ಮಾಹಿತಿ ಪಡೆದುಕೊಂಡರು.

ಜಿಲ್ಲೆಯಲ್ಲಿ ಪಕ್ಷದ ಸಂಘಟನೆಯನ್ನು ತಳಮಟ್ಟದಿಂದ ಮತ್ತಷ್ಟು ಬಲಪಡಿಸುವುದು ಅಗತ್ಯವಾಗಿದೆ. ಯುವ ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಪಕ್ಷದ ಬೆಳವಣಿಗೆಗೆ ಇನ್ನಷ್ಟು ಶ್ರಮ ವಹಿಸಬೇಕು ಲಕ್ಷ್ಮಣ್ ಸವದಿ ಅವರು ಸಲಹೆ ನೀಡಿದರು. 

ಸಲಹೆಗೆ ಧನಾತ್ಮಕವಾಗಿ ಸ್ಪಂದಿಸಿದ ಖಾದ್ರಿ ಅವರು, ಜಿಲ್ಲಾದ್ಯಂತ ಪಕ್ಷದ ಸಂಘಟನೆ ಮತ್ತು ಯುವ ಪಡೆಯನ್ನು ಸಕ್ರಿಯಗೊಳಿಸಲು ಮುಂಬರುವ ದಿನಗಳಲ್ಲಿ ಇನ್ನಷ್ಟು ಕ್ರಿಯಾಶೀಲವಾಗಿ ಕಾರ್ಯಾಚರಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಪಕ್ಷದ ಪ್ರಮುಖ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250