ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Uttara-Kannada

ಹದಗೆಟ್ಟ ರಸ್ತೆ ದುರಸ್ತಿಗೆ ಆಗ್ರಹ: ಶಿರವಾಡದಲ್ಲಿ ಕರವೇ ಗಜಸೇನೆ ಪ್ರತಿಭಟನೆ

Pakka News Web • 12 ಆಗಸ್ಟ್ 2026,

ಕಾರವಾರ:ತಾಲೂಕಿನ ಶಿರವಾಡ ಶಾಲೆಯ ಪಕ್ಕದ ರಸ್ತೆ ಕಳೆದ ಎರಡು ವರ್ಷಗಳಿಂದ ಸಂಪೂರ್ಣ ಹದಗೆಟ್ಟಿದ್ದರೂ ದುರಸ್ತಿ ಮಾಡದಿರುವುದನ್ನು ಖಂಡಿಸಿ, ಕರ್ನಾಟಕ ರಕ್ಷಣಾ ವೇದಿಕೆ (ಗಜಸೇನೆ) ಹಾಗೂ ಸ್ಥಳೀಯರು ಬುಧವಾರ ಪ್ರತಿಭಟನೆ ನಡೆಸಿದರು.

ಖಾಸಗಿ ಜಮೀನಿನ ಅನುಮತಿ ಪತ್ರಗಳಿದ್ದರೂ ಕಾಮಗಾರಿ ಆರಂಭಿಸದಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿ. ಪ್ರತಿದಿನ ನೂರಾರು ಶಾಲಾ ಮಕ್ಕಳು ಹಾಗೂ ಹಿರಿಯ ನಾಗರಿಕರು ಅಪಾಯದಲ್ಲೇ ಸಂಚರಿಸುತ್ತಿದ್ದು, ಮಳೆಯಿಂದ ರಸ್ತೆ ಮತ್ತಷ್ಟು ಭೀಕರವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಭೇಟಿ ನೀಡಿದ PWD ಇಲಾಖೆಯ AEE ರಾಮು ಅರ್ಗೆಕರ ಸಾರ್ವಜನಿಕರ ತರಾಟೆಗೆ ಒಳಗಾದರು. ಪ್ರಸ್ತುತ ಪ್ಯಾಚ್‌ವರ್ಕ್ ಮಾಡಲಾಗಿದ್ದು, ಶಾಶ್ವತ ರಸ್ತೆ ನಿರ್ಮಾಣದ ಟೆಂಡರ್‌ಗೆ 2 ತಿಂಗಳು ಬೇಕಾಗಲಿದೆ ಎಂದು ಸಿಬ್ಬಂದಿ ಸ್ಪಷ್ಟನೆ ನೀಡಿದರು.

ಈ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಾರ್ವಜನಿಕರು, ತಕ್ಷಣವೇ ಪೂರ್ಣ ಪ್ರಮಾಣದ ರಸ್ತೆ ಕಾಮಗಾರಿ ಆರಂಭಿಸದಿದ್ದರೆ ಮುಂದಿನ ದಿನಗಳಲ್ಲಿ ಉಪವಾಸ ಸತ್ಯಾಗ್ರಹ ಸೇರಿದಂತೆ ಬೃಹತ್ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಕರ್ನಾಟಕ ರಕ್ಷಣಾ ವೇದಿಕೆ (ಗಜಸೇನೆ) ಅಧ್ಯಕ್ಷ ರಾಜೇಶ ನಾಯ್ಕ ಹಾಗೂ ಪದಾಧಿಕಾರಿಗಳು ಸ್ಥಳೀಯರು ಪ್ರತಿಭಟನೆಯಲ್ಲಿ ಇದ್ದರು.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250