ಶಿರಸಿ: ಸಾರ್ವಜನಿಕರು ಕಳೆದುಕೊಂಡಿದ್ದ ನಗದು ಹಣ, ಮೊಬೈಲ್‌ಗಳು, ಪ್ರಮುಖ ದಾಖಲೆಗಳು ಹಾಗೂ ಚಿನ್ನದ ಉಂಗುರವನ್ನು ಶಿರಸಿ ಹೊಸ ಮಾರುಕಟ್ಟೆ ಠಾಣೆಯ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪತ್ತೆಹಚ್ಚಿ ವಾರಸುದಾರರಿಗೆ ಮರಳಿಸುವ ಮೂಲಕ ಶ್ಲಾಘನೀಯ ಕಾರ್ಯ ಮಾಡಿದ್ದಾರೆ.
ಬನವಾಸಿ ರಸ್ತೆಯ ನಿವಾಸಿ ದಯಾನಂದ ಹೆಗಡೆ ಎಂಬುವವರು ತಮ್ಮ 60 ಸಾವಿರ ರೂ. ನಗದು, 2 ಮೊಬೈಲ್ ಫೋನ್‌ಗಳು ಹಾಗೂ ಪ್ರಮುಖ ದಾಖಲಾತಿಗಳನ್ನು ಕಳೆದುಕೊಂಡ ಬಗ್ಗೆ ಠಾಣೆಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ ತಕ್ಷಣವೇ ಕಾರ್ಯಪ್ರವೃತ್ತರಾದ ಹೊಸ ಮಾರುಕಟ್ಟೆ ಕ್ರೈಂ ಸಿಬ್ಬಂದಿ, ಕಳೆದುಹೋದ ವಸ್ತುಗಳನ್ನು ಪತ್ತೆಹಚ್ಚಿ ವಾರಸುದಾರರಿಗೆ ಸುರಕ್ಷಿತವಾಗಿ ತಲುಪಿಸಿದ್ದಾರೆ.

ಮತ್ತೊಂದು ಪ್ರತ್ಯೇಕ ಪ್ರಕರಣದಲ್ಲಿ, ಮಾರುತಿ ಗಲ್ಲಿಯ ನಿವಾಸಿ ಸೌಮ್ಯ ಹೆಬ್ಬಾಳ ಅವರು ಕಳೆದುಕೊಂಡಿದ್ದ 70 ಸಾವಿರ ರೂ. ಮೌಲ್ಯದ ಚಿನ್ನದ ಉಂಗುರದ ಬಗ್ಗೆ ನೀಡಿದ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಅದನ್ನು ಪತ್ತೆಹಚ್ಚಿ ಅವರಿಗೆ ಒಪ್ಪಿಸಿದ್ದಾರೆ.
ತಮ್ಮ ಅಮೂಲ್ಯವಾದ ವಸ್ತುಗಳು, ನಗದು ಹಾಗೂ ದಾಖಲೆಗಳನ್ನು ಮರಳಿ ಪಡೆದ ಇಬ್ಬರೂ ಸಂತ್ರಸ್ತರು ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯವರ ತ್ವರಿತ ಸ್ಪಂದನೆ ಹಾಗೂ ದಕ್ಷ ಕಾರ್ಯವೈಖರಿಗೆ ಹರ್ಷ ವ್ಯಕ್ತಪಡಿಸಿದ್ದಾರೆ.
