ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Uttara-Kannada

ಮೆರವಣಿಗೆ ವೇಳೆ ಪ್ಯಾಲೆಸ್ಟೈನ್ ಧ್ವಜ ಪ್ರದರ್ಶನ; ಶಾಂತಿ ಕದಡಲು ಪ್ರಯತ್ನವೇ?

Pakka News Web • 26 ಆಗಸ್ಟ್ 2026,

ಈದ್ ಮಿಲಾದ್ ಅಂಗವಾಗಿ ಅಂಕೋಲಾದಲ್ಲಿ ನಡೆದ ಮೆರವಣಿಗೆಯಲ್ಲಿ ಪ್ಯಾಲೆಸ್ಟೈನ್ ಧ್ವಜ ಪ್ರದರ್ಶನಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಮಧ್ಯಪ್ರವೇಶಿಸಿ ಧ್ವಜವನ್ನು ವಶಕ್ಕೆ ಪಡೆದ ಘಟನೆ ಅಂಕೋಲಾದ ಬಂಡಿಬಜಾರ್ ಬಳಿ ನಡೆದಿದೆ.

ಧ್ವಜ ಪ್ರದರ್ಶಿಸಿದ ಯುವಕನಿಗೆ ಇಂತಹ ಪ್ರದರ್ಶನ ಮುಂದುವರಿಸದಂತೆ ಪೊಲೀಸರು ಎಚ್ಚರಿಕೆ ನೀಡಿದ್ದು, ಬಳಿಕ ಮೆರವಣಿಗೆ ಶಾಂತಿಯುತವಾಗಿ ಮುಂದುವರಿಯಿತು.

ಅಂಕೋಲಾ ಪಟ್ಟಣದ ಬೊಬ್ರುವಾಡದಿಂದ ಆರಂಭಗೊಂಡ ಮೆರವಣಿಗೆ ಬಂಡಿಬಜಾರ್ ಬಳಿ ಸಾಗುತ್ತಿದ್ದ ವೇಳೆ ಪ್ಯಾಲೆಸ್ಟೈನ್ ಧ್ವಜ ಪ್ರದರ್ಶಿಸಿರುವುದು ಪೊಲೀಸರ ಗಮನಕ್ಕೆ ಬಂದಿದೆ. ತಕ್ಷಣ ಸ್ಥಳಕ್ಕೆ ತೆರಳಿದ ಅಂಕೋಲಾ ಸಿಪಿಐ ಚಂದ್ರಶೇಖರ್ ಮಠಪತಿ ಅವರು ಧ್ವಜವನ್ನು ವಶಕ್ಕೆ ಪಡೆದು, ಮೆರವಣಿಗೆಯಲ್ಲಿ ಇಂತಹ ಧ್ವಜಗಳನ್ನು ಪ್ರದರ್ಶಿಸದಂತೆ ಸೂಚಿಸಿದರು.

ಪೊಲೀಸರ ಮಧ್ಯಪ್ರವೇಶದ ಬಳಿಕ ಪರಿಸ್ಥಿತಿ ತಿಳಿಗೊಂಡಿದ್ದು, ಯಾವುದೇ ಅಹಿತಕರ ಘಟನೆ ನಡೆಯದೆ ಮೆರವಣಿಗೆ ಮುಂದುವರಿಯಿತು. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಪರಿಸ್ಥಿತಿಯ ಮೇಲೆ ನಿಗಾ ವಹಿಸಿದರು.

ಈದ್ ಪೂರ್ವದಲ್ಲಿ ಪೊಲೀಸ್ ಇಲಾಖೆಯಿಂದ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಶಾಂತಿ ಸಭೆ ಆಯೋಜನೆ ಮಾಡಲಾಗಿತ್ತು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹ ಮಾಡಿದ್ದಾರೆ


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250