ಅಕ್ಟೋಬರ್ 26, 2026
ಸೋಮವಾರ

ನಮ್ಮನ್ನು ಅನುಸರಿಸಿ

Trending

ಬಂಗಾರಮಕ್ಕಿಯಲ್ಲಿ ಸ್ಮೃತಿ ಮಂಧಾನ; ವೀರಾಂಜನೇಯ ಸ್ವಾಮಿಯ ದರ್ಶನ

Pakka News Web • 3 ಆಕ್ಟೋ 2026,

ಹೊನ್ನಾವರ: ಕ್ರಿಕೆಟ್ ಮೈದಾನದಲ್ಲಿ ಮಿಂಚುತ್ತಿರುವ ಭಾರತ ಮಹಿಳಾ ತಂಡದ ಉಪನಾಯಕಿ ಸ್ಮೃತಿ ಮಂಧಾನ ಅವರು ಉತ್ತರ ಕನ್ನಡ ಪ್ರವಾಸದ ವೇಳೆ ಹೊನ್ನಾವರ ತಾಲೂಕಿನ ಪ್ರಸಿದ್ಧ ಬಂಗಾರಮಕ್ಕಿ ಶ್ರೀಕ್ಷೇತ್ರಕ್ಕೆ ಭೇಟಿ ನೀಡಿ ವೀರಾಂಜನೇಯ ಸ್ವಾಮಿಯ ದರ್ಶನ ಪಡೆದರು.

ಬಂಗಾರಮಕ್ಕಿ ಕ್ಷೇತ್ರಕ್ಕೆ ಆಗಮಿಸಿದ ಸ್ಮೃತಿ ಮಂಧಾನ ಅವರನ್ನು ಕ್ಷೇತ್ರದ ವತಿಯಿಂದ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಬಳಿಕ ದೇವಾಲಯಕ್ಕೆ ತೆರಳಿದ ಅವರು ವೀರಾಂಜನೇಯ ಸ್ವಾಮಿಯ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ನಡೆಸಿದರು.

ದರ್ಶನದ ಬಳಿಕ ಶ್ರೀಕ್ಷೇತ್ರದ ಮಾರುತಿ ಗುರೂಜಿ ಅವರನ್ನು ಭೇಟಿಯಾದ ಸ್ಮೃತಿ ಮಂಧಾನ ಅವರು ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಕ್ಷೇತ್ರದ ವತಿಯಿಂದ ಅವರನ್ನು ಗೌರವಿಸಲಾಯಿತು.

ಸ್ಮೃತಿ ಮಂಧಾನ ಅವರ ಭೇಟಿ ವಿಷಯ ತಿಳಿಯುತ್ತಿದ್ದಂತೆ ಕ್ಷೇತ್ರಕ್ಕೆ ಆಗಮಿಸಿದ್ದ ಭಕ್ತರು ಹಾಗೂ ಅಭಿಮಾನಿಗಳಲ್ಲಿ ವಿಶೇಷ ಉತ್ಸಾಹ ಕಂಡುಬಂದಿತು. ಅವರ ಸರಳ ಭೇಟಿ ಕ್ಷೇತ್ರದ ಭಕ್ತರ ಗಮನ ಸೆಳೆಯಿತು.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250