12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಸಾರ್ವಜನಿಕರಿಂದ ಯೋಗಾಸನದ ವಿವಿಧ ಭಂಗಿಗಳ ಛಾಯಾಚಿತ್ರಗಳನ್ನು ‘ಪಕ್ಕಾ ಲೋಕಲ್ ಡಿಜಿಟಲ್’ ಮಾಧ್ಯಮದ ವತಿಯಿಂದ ಆಹ್ವಾನಿಸಲಾಗಿತ್ತು. ಇದಕ್ಕೆ ಉತ್ತರ ಕನ್ನಡ ಜಿಲ್ಲೆಯ ವಿವಿಧ ಭಾಗಗಳಿಂದ ಸಾರ್ವಜನಿಕರು ಅತ್ಯಂತ ಉತ್ಸಾಹದಿಂದ ಸ್ಪಂದಿಸಿ, ತಮ್ಮ ಫೋಟೊಗಳನ್ನು ಕಳುಹಿಸಿಕೊಟ್ಟಿದ್ದಾರೆ. ಹಾಗೆ ಬಂದಿರುವ ಪ್ರಮುಖ ಹಾಗೂ ಆಯ್ದ ಯೋಗದ ಸುಂದರ ಚಿತ್ರಗಳನ್ನು ನಮ್ಮ ಡಿಜಿಟಲ್ ಮಾಧ್ಯಮದಲ್ಲಿ ಈಗ ಹೆಮ್ಮೆಯಿಂದ ಪ್ರಕಟಿಸಲಾಗುತ್ತಿದೆ.
ಮೈ ಭಾರತ್ ಕೇಂದ್ರ ಕಾರವಾರ ಹಾಗೂ ಕಡಲ ಸಿರಿ ಯುವ ಸಂಘ ಕಾರವಾರ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ Photo

ಪುಟಾಣಿ ಅನನ್ಯ ಬಾಡಕರ,ಮುರ್ಡೇಶ್ವರ ಯೋಗಾಸನದ ಚಿತ್ರ

ಕಾರವಾರ ನಗರದ ಶಾರದಾ ಮಂದಿರ ಶಾಲೆಯಲ್ಲಿ ಯೋಗ ದಿನದ ಆಚರಣೆ

ಅಂಕೋಲಾ ತಾಲೂಕಿನ ಬೆಳಂಬಾರದ ಸಿಂಚನಾ ಗೋಪಾಲ ಗೌಡ ಅವರ ಯೋಗ ಮಾಡುತ್ತಿರುವ ಚಿತ್ರ

ಶ್ರೀ ಮಾರಿಕಾಂಬಾ ಪ್ರೌಢಶಾಲೆ, ಶಿರಸಿ: 1628 ವಿದ್ಯಾರ್ಥಿಗಳಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಶ್ರೀ ಮಾರಿಕಾಂಬಾ ಪ್ರೌಢಶಾಲೆ, ಶಿರಸಿಯಲ್ಲಿ ಭವ್ಯ ಯೋಗ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಒಟ್ಟಾಗಿ ವಿವಿಧ ಯೋಗಾಸನಗಳು ಮತ್ತು ಪ್ರಾಣಾಯಾಮಗಳನ್ನು ಅಭ್ಯಾಸ ಮಾಡುವ ಮೂಲಕ ಯೋಗದ ಮಹತ್ವವನ್ನು ಸಾರಿದರು.

ಜಿಲ್ಲಾಡಳಿತದಿಂದ ಕಾರವಾರದ ಕಾಜುಭಾಗದ ಪೊಲೀಸ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಿ ಯೋಗ ದಿನದ ಫೋಟೊ, ಜಿಲ್ಲಾಧಿಕಾರಿ, ಜಿಪಂ ಸಿಇಒ ಸೇರಿದಂತೆ ನೂರಾರು ಜನ ಭಾಗಿ

ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ರವಿವಾರ ಕಾರವಾರದ ಶಿವಾಜಿ ಬಾಡ ಕಾಲೇಜಿನಲ್ಲಿ ಪತಂಜಲಿ ಯೋಗ ಪೀಠ ಹಾಗೂ ಬಿಜೆಪಿ ಕಾರವಾರ ಘಟಕದ ಜಂಟಿ ಆಶ್ರಯದಲ್ಲಿ ಅಂತರರಾಷ್ಟ್ರೀಯ ಯೋಗ ದಿನವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಯಿತು. ಯೋಗ ಗುರುಗಳಾದ ಶ್ರೀ ಪ್ರಶಾಂತ್ ರೇವಣಕರ್ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು.

ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲಿನಲ್ಲಿ ವಿಶ್ವ ಯೋಗ ದಿನಾಚರಣೆ :ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲಿನಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಯೋಗದ ಮಹತ್ವ ಹಾಗೂ ಆರೋಗ್ಯದ ಮೇಲೆ ಅದರ ಪರಿಣಾಮಗಳ ಕುರಿತು ಅರಿವು ಮೂಡಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯಾಧ್ಯಾಪಕ ವಿಶ್ವನಾಥ ಬೇವಿನಕಟ್ಟಿ ವಹಿಸಿದ್ದರು.

ಕುಮಟಾ ತಾಲೂಕಿನ ಮುರೂರಿನ ಪ್ರಗತಿ ಹೈಸ್ಕೂಲ್ ನಲ್ಲಿ ಯೋಗ ದಿನಾಚರಣೆ ನಡೆಯಿತು

Adichunchanagiri Independent P. U college and BGS central school, Mirjan Yoga day

ಸಂತ ನಿರಂಕಾರಿ ಮಿಷನ್ ವತಿಯಿಂದ ಅಂತರರಾಷ್ಟ್ರೀಯ ಯೋಗ ದಿನಾಚರಣೆ: ಸಂತ ನಿರಂಕಾರಿ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಕಾರವಾರ ನಗರದ ತೇಲಂಗ ರಸ್ತೆ ಮಣಿಕಟ್ಟಾ ಬಾಡನಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಆರ್. ಪಿ. ಎಸ್. ಸೆಕಂಡರಿ ಸ್ಕೂಲ್ ಬೆಳಸೆ ಅಂಕೋಲಾ ತಾಲೂಕಿನಲ್ಲಿ ಯೋಗ ದಿನದ ಸಂಭ್ರಮ

