ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

State-National

ರೈಲ್ವೆ ಯಾತ್ರಿಕರಿಗಾಗಿ ಒಂದು ಸುದ್ದಿ!

Pakka News Web • 5 ಆಗಸ್ಟ್ 2026,

ದಕ್ಷಿಣ ಪಶ್ಚಿಮ ರೈಲ್ವೆಯ ಶ್ರಿವಾಗಿಲು ಹಾಗೂ ಯಡಕುಮಾರಿ ವಿಭಾಗಗಳ ನಡುವೆ ರೈಲ್ವೆ ಹಳಿಗಳ ಟ್ಯಾಂಪಿಂಗ್ ಮತ್ತು ಮೆಟೀರಿಯಲ್ ರೈಲು ಕಾಮಗಾರಿಗಳು ಭರದಿಂದ ಸಾಗುತ್ತಿವೆ. ಈ ಅಗತ್ಯ ನಿರ್ವಹಣಾ ಕಾಮಗಾರಿಯ ಹಿನ್ನೆಲೆಯಲ್ಲಿ, ಕಾರವಾರ ಮತ್ತು ಯಶವಂತಪುರ ನಡುವೆ ಸಂಚರಿಸುವ ಎಕ್ಸ್‌ಪ್ರೆಸ್‌ರೈಲು ಸೇವೆಯನ್ನು ಒಟ್ಟು 11 ದಿನಗಳ ಅವಧಿಗೆ ಸಂಪೂರ್ಣವಾಗಿ ರದ್ದುಗೊಳಿಸಿ ರೈಲ್ವೆ ಇಲಾಖೆ ಆದೇಶಿಸಿದೆ.

ರೈಲ್ವೆ ಪ್ರಕಟಣೆಯ ಪ್ರಕಾರ, ಯಶವಂತಪುರದಿಂದ ಕಾರವಾರಕ್ಕೆ ತೆರಳುವ (ರೈಲು ಸಂಖ್ಯೆ 16515) ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್ 5, 7, 9, 12, 14, 21, 23, 26, 28, 30 ಹಾಗೂ ನವೆಂಬರ್ 2ರಂದು ಸಂಚರಿಸುವುದಿಲ್ಲ. ಹಾಗೆಯೇ, ಕಾರವಾರದಿಂದ ಯಶವಂತಪುರಕ್ಕೆ ಮರಳುವ (ರೈಲು ಸಂಖ್ಯೆ 16516) ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್ 6, 8, 10, 13, 15, 22, 24, 27, 29, 31 ಮತ್ತು ನವೆಂಬರ್ 3ರಂದು ರದ್ದಾಗಲಿದೆ.

ಈ ಮಾರ್ಗದಲ್ಲಿ ಪ್ರಯಾಣಿಸಲು ಯೋಜಿಸಿರುವ ಪ್ರಯಾಣಿಕರು ರೈಲು ರದ್ದತಿಯ ದಿನಾಂಕಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣವನ್ನು ಕಾಯ್ದಿರಿಸಿಕೊಳ್ಳಲು ಕೋರಲಾಗಿದೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250