ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Trending

ಶಿರಸಿಯಲ್ಲಿ ಸೆಪ್ಟೆಂಬರ್ 7 ಮತ್ತು 8 ರಂದು ‘ವಸ್ತ್ರಂ ಲೈಫ್ ಸ್ಟೈಲ್ ಎಕ್ಸಿಬಿಷನ್’ ಆಯೋಜನೆ!

Pakka News Web • 5 ಸೆಪ್ಟೆಂ 2026,

ಶಿರಸಿ:ಶ್ರೀ ಗೌರಿ-ಗಣೇಶ ಹಬ್ಬದ ಸಂಭ್ರಮದ ಅಂಗವಾಗಿ ಶ್ರೀ ಸಾಯಿ ಸಮೃದ್ಧಿ ಸಂಸ್ಥೆಯು ಶಿರಸಿಯ ಯಲ್ಲಾಪುರ ರಸ್ತೆಯ ಬಾಪೂಜಿ ನಗರದಲ್ಲಿರುವ ಡಾ. ಬಿ. ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಎರಡು ದಿನಗಳ ಬೃಹತ್ ‘ವಸ್ತ್ರಂ ಲೈಫ್ ಸ್ಟೈಲ್ ಎಕ್ಸಿಬಿಷನ್’ ಮಾರಾಟ ಹಾಗೂ ಪ್ರದರ್ಶನ ಮೇಳವನ್ನು ಹಮ್ಮಿಕೊಂಡಿದೆ. 

ಈ ಪ್ರದರ್ಶನವು ಸೆಪ್ಟೆಂಬರ್ 7 ಮತ್ತು 8ರ ಸೋಮವಾರ ಹಾಗೂ ಮಂಗಳವಾರದಂದು ಬೆಳಗ್ಗೆ 10:00 ಗಂಟೆಯಿಂದ ರಾತ್ರಿ 9:00 ಗಂಟೆಯವರೆಗೆ ಸಾರ್ವಜನಿಕರಿಗೆ ಮುಕ್ತವಾಗಿರಲಿದ್ದು, ಪ್ರವೇಶ ಸಂಪೂರ್ಣ ಉಚಿತ.

ಹಬ್ಬದ ಶಾಪಿಂಗ್ ಪ್ರಿಯರನ್ನು ಆಕರ್ಷಿಸಲು ಸೀರೆಗಳ ಖರೀದಿಯ ಮೇಲೆ ‘ಬೈ 1 ಗೆಟ್ 1 ಫ್ರೀ’ (Buy 1 Get 1 Free) ವಿಶೇಷ ಆಫರ್ ನೀಡಲಾಗುತ್ತಿದೆ. ಮೇಳದಲ್ಲಿ ವಿವಿಧ ಮಾದರಿಯ ಸಾಂಪ್ರದಾಯಿಕ ಹಾಗೂ ಡಿಸೈನರ್ ಸೀರೆಗಳು, ಬ್ಲೌಸ್‌ಗಳು, ಟ್ರೆಂಡಿ ಕುರ್ತಿಗಳು, ಆಕರ್ಷಕ ಆಭರಣಗಳು, ಹ್ಯಾಂಡ್‌ಬ್ಯಾಗ್‌ಗಳು ಮತ್ತು ಬೆಡ್ ಲಿನೆನ್ ಸೇರಿದಂತೆ ಗೃಹಬಳಕೆಯ ನವೀನ ಸಂಗ್ರಹಗಳು ಒಂದೇ ಸೂರಿನಡಿ ಲಭ್ಯವಿರಲಿವೆ. ಇದರೊಂದಿಗೆ ಲೈವ್ ಆರ್ಟ್ಸ್, ಮಕ್ಕಳ ಆಟಿಕೆಗಳು ಹಾಗೂ ಬಗೆಬಗೆಯ ಆಹಾರ ಪದಾರ್ಥಗಳ ಮಳಿಗೆಗಳು ಸಾರ್ವಜನಿಕರ ಗಮನ ಸೆಳೆಯಲಿವೆ.

ಅಲ್ಲದೆ, ಸಾರ್ವಜನಿಕರಿಂದ ಹಳೆಯ ಜರಿ ಸೀರೆಗಳನ್ನು ಖರೀದಿಸಿ ಸ್ಥಳದಲ್ಲೇ ತಕ್ಷಣ ನಗದು ಹಣ ನೀಡುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಹಳೆಯ ಜರಿ ಸೀರೆ ಮಾರಾಟಕ್ಕೆ 8971333838 ಹಾಗೂ ಮಳಿಗೆಗಳ (ಸ್ಟಾಲ್) ಕಾಯ್ದಿರಿಸುವಿಕೆಗಾಗಿ 9740959963 ಅಥವಾ 9482429963 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250