ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Uttara-Kannada

ಜುಲೈ 8 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ  

Pakka News Web • 7 ಜುಲೈ 2026,

ಕಾರವಾರ:ಹೆಸ್ಕಾಂ ಕುಮಟಾ ಉಪವಿಭಾಗದ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣೆ ಹಾಗೂ ಹೆದ್ದಾರಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜುಲೈ 8 ರಂದು ತಾಲೂಕಿನ ನಗರ ಮತ್ತು ಗ್ರಾಮೀಣ ಭಾಗದ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಇಲಾಖೆ ತಿಳಿಸಿದೆ.

ಹೆಸ್ಕಾಂ, ಕುಮಟಾ ಉಪವಿಭಾಗದ 110ಕೆ.ವಿ ಕುಮಟಾ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ ಜು.8 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ 33ಕೆ.ವಿ ಗೋಕರ್ಣ (ಮಾದನಗೇರಿ, ಗೋಕರ್ಣ,ಬಿಜ್ಜೂರ, ತದಡಿ, ಬಂಕಿಕೊಡ್ಲ, ಗಂಗಾವಳಿ,ಓಂ ಬೀಚ್ ಭಾಗಗಳಲ್ಲಿ), 33ಕೆ.ವಿ ಮಿರ್ಜಾನ್ (ಮಿರ್ಜಾನ್, ನಾಗೂರ, ಖಂಡಗಾರ, ಕೋಡ್ಕಣಿ,ಯಲವಳ್ಳಿ ಭಾಗಗಳಲ್ಲಿ) ಹಾಗೂ 33ಕೆ.ವಿ ಮರಾಕಲ್ (ಸಂತೆಗುಳಿ,ಕಲ್ಲಬ್ಬೆ, ಹೊದಕೆಶಿರೂರ, ಕೂಜಳ್ಳಿ, ದಿವಳ್ಳಿ) ಮಾರ್ಗದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಕುಮಟಾ ಉಪವಿಭಾಗದ ನಗರ ಶಾಖೆಯ 11ಕೆ.ವಿ ಕುಮಟಾ ಟೌನ್ ಮಾರ್ಗದಲ್ಲಿ ಆಯ್.ಆರ್.ಬಿ ರವರ ವಿದ್ಯುತ್ ಮಾರ್ಗ ಸ್ಥಳಾಂತರ ಕಾಮಗಾರಿ ಇರುವುದರಿಂದ ಜು.8 ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ 11ಕೆ.ವಿ ಕುಮಟಾ ಟೌನ್ ಮಾರ್ಗದ ಎ.ಪಿ.ಎಮ್.ಸಿ, ಹೊನ್ಮಾಂವ, ಕಂಬಾರಮಕ್ಕಿ, ಬಗ್ಗೋಣ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಾಕರಿಸುವಂತೆ ಹೆಸ್ಕಾಂ, ಕುಮಟಾ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು(ವಿ) ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250