ಕಾರವಾರ:ಶಿವಾಜಿ ವಿದ್ಯಾ ಮಂದಿರ ಅಸ್ನೋಟಿ ಬಾಲಕರ ವಸತಿ ನಿಲಯದ ಮಕ್ಕಳಿಗೆ ಅಗತ್ಯವಾಗಿ ಬೇಕಾಗಿದ್ದ ಕೇರಂ ಬೋರ್ಡ್, ಚೆಸ್ ಬೋರ್ಡ್ ಮತ್ತು ಇತರೆ ಕ್ರೀಡಾ ಸಾಮಾಗ್ರಿಗಳನ್ನು ದಾನವಾಗಿ ನೀಡುವ ಮೂಲಕ ಶಿಕ್ಷಕ ವಿಕ್ರಾಂತ ತಾಂಡೇಲ ಅವರು ಮಕ್ಕಳ ಮನಗೆದ್ದಿದ್ದಾರೆ.
ಆಟೋಟದ ಸಾಮಾಗ್ರಿಗಳನ್ನು ಸ್ವೀಕರಿಸಿದ ಮಕ್ಕಳೆಲ್ಲರೂ ಸಂಭ್ರಮದಿಂದ ಧನ್ಯವಾದ ಅರ್ಪಿಸಿದರು.

ಕಾರ್ಯಕ್ರಮದಲ್ಲಿ ಮಕ್ಕಳೊಂದಿಗೆ ವಸತಿ ನಿಲಯದ ವಾತಾವರಣದಲ್ಲಿ ಖುಷಿಯ ಕ್ಷಣಗಳು ಕಂಡುಬಂದವು.
ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಮುಖ್ಯಾಧ್ಯಾಪಕರಾದ ಡಾ. ಗಣೇಶ ಬಿಷ್ಟಣ್ಣನವರು, ಶಿಕ್ಷಕರ ಈ ಔದಾರ್ಯದ ಗುಣವನ್ನು ಪ್ರಶಂಸಿಸಿ ಕೃತಜ್ಞತೆ ಸಲ್ಲಿಸಿದರು. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಇಂತಹ ಕ್ರೀಡಾ ಸಾಮಾಗ್ರಿಗಳು ಬಹಳ ಸಹಾಯಕವಾಗಲಿವೆ. ತಾಂಡೇಲ ಅವರ ಈ ಕೊಡುಗೆ ಇತರರಿಗೆ ಮಾದರಿಯಾಗಲಿ” ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ವಸತಿ ನಿಲಯದ ಸಿಬ್ಬಂದಿ ಉಪಸ್ಥಿತರಿದ್ದರು. ರಾಷ್ಟ್ರಧ್ವಜದ ಅಲಂಕಾರದ ನಡುವೆ ನಡೆದ ಈ ಸರಳ ಕಾರ್ಯಕ್ರಮ ಮಕ್ಕಳಲ್ಲಿ ಹೊಸ ಉತ್ಸಾಹ ತುಂಬಿತು.
