ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Uttara-Kannada

ವೈಟ್‌ಬೋರ್ಡ್ ಕಾರಿನ ವಾಣಿಜ್ಯ ಬಳಕೆ ಆರೋಪ; ವಾಹನ ವಶಕ್ಕೆ ಪಡೆದು ಆರ್‌ಟಿಒಗೆ ಹಸ್ತಾಂತರ

Pakka News Web • 10 ಜುಲೈ 2026,

ಖಾಸಗಿ ನೋಂದಣಿಯ ವೈಟ್‌ಬೋರ್ಡ್ ವಾಹನವನ್ನು ನಿಯಮ ಉಲ್ಲಂಘಿಸಿ ವಾಣಿಜ್ಯ ಬಳಕೆಗೆ ಇಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸ್ಥಳೀಯ ಕಾರು ಚಾಲಕರು ಕಾರು ವಶಕ್ಕೆ ಪಡೆದು ಆರ್‌ಟಿಒ ಅಧಿಕಾರಿಗಳಿಗೆ ಹಸ್ತಾಂತರಿಸಿದ ಘಟನೆ ಕಾರವಾರ ನಗರದಲ್ಲಿ ನಡೆದಿದೆ.

ನಗರದಲ್ಲಿ ಹಳದಿಬೋರ್ಡ್ ನೋಂದಣಿಯೊಂದಿಗೆ ಕಾನೂನುಬದ್ಧವಾಗಿ ಬಾಡಿಗೆ ಸೇವೆ ನೀಡುತ್ತಿರುವ ಚಾಲಕರು ಮತ್ತು ವಾಹನ ಮಾಲೀಕರು, ಖಾಸಗಿ ಬಳಕೆಗೆ ಮಾತ್ರ ಅನುಮತಿಸಲ್ಪಟ್ಟ ವೈಟ್‌ಬೋರ್ಡ್ ವಾಹನಗಳನ್ನು ವಾಣಿಜ್ಯ ಸೇವೆಗೆ ಇಳಿಸುವುದರಿಂದ ತಮ್ಮ ಉದ್ಯಮಕ್ಕೆ ನಷ್ಟ ಉಂಟಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ವಾಹನ ಖರೀದಿಸಿ, ತೆರಿಗೆ, ವಿಮೆ ಹಾಗೂ ಇತರೆ ಕಾನೂನುಬದ್ಧ ಶುಲ್ಕಗಳನ್ನು ಪಾವತಿಸುತ್ತಿರುವ ನಮಗೆ ಇಂತಹ ಅಕ್ರಮ ಬಳಕೆ ಅನ್ಯಾಯಕರ ಸ್ಪರ್ಧೆಯಾಗಿದೆ ಎಂದು ಅವರು ಹೇಳಿದ್ದಾರೆ.

ವೈಟ್‌ಬೋರ್ಡ್ ವಾಹನವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಸ್ಥಳೀಯ ಚಾಲಕರು ವಾಹನವನ್ನು ತಡೆದು ಪರಿಶೀಲನೆ ನಡೆಸಿ, ಬಳಿಕ ಅದನ್ನು ಆರ್‌ಟಿಒ ಅಧಿಕಾರಿಗಳ ವಶಕ್ಕೆ ಒಪ್ಪಿಸಿದ್ದಾರೆ. ನಂತರ ಆರ್‌ಟಿಒ ಅಧಿಕಾರಿಗಳು ವಾಹನವನ್ನು ಚಿತ್ತಾಕುಲಾ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ವಾಹನ ಚಾಲಕ ಹಾಗೂ ಮಾಲೀಕರಾದ ರಾಹುಲ್ ನಾಯ್ಕ, ಖಾಸಗಿ ವಾಹನಗಳ ಅಕ್ರಮ ವಾಣಿಜ್ಯ ಬಳಕೆಯಿಂದ ಕಾನೂನುಬದ್ಧವಾಗಿ ಬಾಡಿಗೆ ಸೇವೆ ನೀಡುತ್ತಿರುವ ಚಾಲಕರಿಗೆ ನಷ್ಟವಾಗುತ್ತಿದ್ದು, ಇಂತಹ ಪ್ರಕರಣಗಳನ್ನು ತಡೆಯಲು ಸಾರಿಗೆ ಮತ್ತು ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250