ವಿವಿಧ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಜು.22ರಂದು ವಿದ್ಯುತ್ ಕಡಿತ ಮಾಡಲಾಗಿದೆ ಎಂದು ಹೆಸ್ಕಾಂ ಕಚೇರಿ ಮಾಹಿತಿ ನೀಡಿದೆ. ಹೆಸ್ಕಾಂ, ದಾಂಡೇಲಿ ಉಪ ವಿಭಾಗ ವ್ಯಾಪ್ತಿಯಲ್ಲಿ 11ಕೆ.ವಿ ಮಾರ್ಗದ ನಗರೋತ್ಥಾನ ಕಂಬಗಳ ಸ್ಥಳಾಂತರದ ಕಾರ್ಯದ ನಿಮಿತ್ತ ತಾಲೂಕಿನ ವಿವಿಧೆಡೆ ಜು 22 ರಂದು ಬೆಳಗ್ಗೆ 9.30 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಕಡಿತವಾಗಿದೆ.
ತಾಲೂಕಿನ ಡಬಲ್ ಬಿಲ್ಡಿಂಗ್, ಜೆ.ಎನ್ ರೋಡ್, ಲೆನಿನ್ ರೋಡ್, ಬಾಂಬೆ ಚಾಳ, ಲಿಂಕ್ ರೋಡ್, ಸಂಡೇ ಮಾರ್ಕೆಟ್, ಸೊಮಾನಿ ಸರ್ಕಲ್, ಸಿಎಂಸಿ ಕ್ವಾಟರ್ಸ್, ಜನರಲ್ ಆಸ್ಪತ್ರೆ, ಸಾಯಿನಗರ, ಗಾಂಧಿನಗರ, ವನಶ್ರೀ ನಗರ, ಮಾರುತಿ ನಗರ, ಟಿ.ವಿ ಸ್ಟೇಷನ್, ಟೌನ್‌ಶಿಪ್, ಡಿಎಫ್‌ಎ ಟೌನ್‌ಶಿಪ್, ವಿಜಯನಗರ 14ನೇ ಬ್ಲಾಕ್, ಹಳೆಯ ಸಿಎಂಸಿ, ಗಣೇಶ ನಗರ, ಹಳೆ ದಾಂಡೇಲಿ ಹಾಗೂ ಲಮಾಣಿ ಚಾಳ ಸೇರಿದಂತೆ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ದಾಂಡೇಲಿಯ ಹೆಸ್ಕಾಂ ಕಾರ್ಯ ನಿರ್ವಾಹಕ ಇಂಜಿನೀಯರ್(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೊನ್ನಾವರ: ವಿದ್ಯುತ್ ವ್ಯತ್ಯಯ.
ಹೆಸ್ಕಾಂ, ಹೊನ್ನಾವರ ಉಪ ವಿಭಾಗ ವ್ಯಾಪ್ತಿಯಲ್ಲಿ 33/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದ ನಿರ್ವಹಣಾ ಕಾರ್ಯದ ನಿಮಿತ್ತ ಜು.22 ರಂದು ಬೆಳಗ್ಗೆ 10 ಗಂಟೆಯಿAದ ಮಧ್ಯಾಹ್ನ 3 ಗಂಟೆಯವರೆಗು ಕೆಳನೂರು, ಟೊಂಕಾ, ಬಳಕೂರು, ದೇವರಗದ್ದೆ ಮತ್ತು ಇಡಗುಂಜಿ ಫೀಡರುಗಳ ವ್ಯಾಪ್ತಿಯಲ್ಲಿ ಹಾಗೂ ಗೇರುಸೊಪ್ಪ ಶಾಖೆಯ 11 ಕೆ.ವಿ ಮಾರ್ಗದ ನಿರ್ವಹಣೆಯ ನಿರ್ಮಿತ ಮಾಗೋಡ, ಉಪ್ಪೋಣಿ ಫೀಡರಿಗಳ ವ್ಯಾಪ್ತಿಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಹೊನ್ನಾವರ ಹೆಸ್ಕಾಂ, ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
