ಸಿದ್ದಾಪುರ: ಸಿದ್ದಾಪುರ ಉಪವಿಭಾಗದ ಪಟ್ಟಣ ಶಾಖೆ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜುಲೈ 28, ಮಂಗಳವಾರದಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಈ ಸಮಯದಲ್ಲಿ ಸಾಗರ ಸರ್ಕಲ್, ಕೊಂಡ್ಲಿ, ಹಾಳದಕಟ್ಟ, ಪೋಸ್ಟ್ ಆಫೀಸ್, ಬಸವನಗಲ್ಲಿ, ರಥಬೀದಿ, ಹಣಜೀಬೈಲ್, ಜಾತಿಕಟ್ಟಿ ಮತ್ತು ಜನತಾ ಕಾಲೋನಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ. ಆದ್ದರಿಂದ ಸಾರ್ವಜನಿಕರು ಹಾಗೂ ವಿದ್ಯುತ್ ಗ್ರಾಹಕರು ಕಂಪನಿಯೊಂದಿಗೆ ಸಹಕರಿಸಬೇಕಾಗಿ ಹೆಸ್ಕಾಂ (HESCOM) ಕಾರ್ಯ ಮತ್ತು ಪಾಲನಾ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮನವಿ ಮಾಡಿದ್ದಾರೆ.
ಜುಲೈ 28ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
