ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Uttara-Kannada

ಸಿದ್ದಾಪುರ: BS6 ಹಾಗೂ ಇವಿ ವಾಹನ ತಾಂತ್ರಿಕ ತರಬೇತಿ ಶಿಬಿರ ಯಶಸ್ವಿ ಮುಕ್ತಾಯ

Pakka News Web • 26 ಜುಲೈ 2026,

ಸಿದ್ದಾಪುರ:ಕರ್ನಾಟಕ ರಾಜ್ಯ ದ್ವಿಚಕ್ರ ವಾಹನ ತಂತ್ರಜ್ಞರು ಕಲಿಯೋಣ, ಕಲಿಸೋಣ ಕ್ಷೇಮಾಭಿವೃದ್ಧಿ ಟ್ರಸ್ಟ್ ಹಾಗೂ ಸಿದ್ದಾಪುರ ದ್ವಿಚಕ್ರ ದುರಸ್ತಿಗಾರರ ಸಂಘದ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ ‘BS6 ಮತ್ತು ಇವಿ (ಎಲೆಕ್ಟ್ರಿಕ್ ವಾಹನ) ತಾಂತ್ರಿಕ ತರಬೇತಿ ಕಾರ್ಯಕ್ರಮ’ವು ರವಿವಾರ ಯಶಸ್ವಿಯಾಗಿ ಮುಕ್ತಾಯಗೊಂಡಿತು.

ಸಿದ್ದಾಪುರ ಪಟ್ಟಣದ ರವೀಂದ್ರ ನಗರದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಜುಲೈ 25 ಮತ್ತು 26ರಂದು ನಡೆದ ಈ ಕಾರ್ಯಗಾರದಲ್ಲಿ ತಾಲೂಕಿನ ಹಾಗೂ ಸುತ್ತಮುತ್ತಲ ಪ್ರದೇಶಗಳ ನೂರಾರು ದ್ವಿಚಕ್ರ ವಾಹನ ಮೆಕ್ಯಾನಿಕ್‌ಗಳು ಮತ್ತು ದುರಸ್ತಿಗಾರರು ಭಾಗವಹಿಸಿ ತರಬೇತಿ ಪಡೆದುಕೊಂಡರು.

ಇತ್ತೀಚಿನ ದಿನಗಳಲ್ಲಿ ಆಟೋಮೊಬೈಲ್ ಕ್ಷೇತ್ರದಲ್ಲಿ ತಾಂತ್ರಿಕತೆ ವೇಗವಾಗಿ ಬದಲಾಗುತ್ತಿದ್ದು, ಅತ್ಯಾಧುನಿಕ ಬಿಎಸ್-6 (BS6) ತಂತ್ರಜ್ಞಾನ ಹಾಗೂ ಎಲೆಕ್ಟ್ರಿಕ್ ವಾಹನಗಳು (EV) ರಸ್ತೆಗಿಳಿಯುತ್ತಿವೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ವಾಹನ ದುರಸ್ತಿಗಾರರು ಹೊಸ ತಂತ್ರಜ್ಞಾನಕ್ಕೆ ತಕ್ಕಂತೆ ತಮ್ಮ ವೃತ್ತಿಪರ ಕೌಶಲ್ಯ ಮತ್ತು ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಈ ಶಿರೋನಾಮೆಯಡಿ ವಿಶೇಷ ತರಬೇತಿಯನ್ನು ನೀಡಲಾಯಿತು.

ಪರಿಣಿತ ತರಬೇತುದಾರರಿಂದ ನಡೆದ ಈ ಶಿಬಿರದಲ್ಲಿ ಬಿಎಸ್-6 ವಾಹನಗಳ ಎಂಜಿನ್ ಸೆನ್ಸಾರ್‌ಗಳು, ಫ್ಯುಯೆಲ್ ಇಂಜೆಕ್ಷನ್ ಸಿಸ್ಟಮ್, ಫಾಲ್ಟ್ ಕೋಡ್‌ಗಳನ್ನು ಪತ್ತೆಹಚ್ಚುವುದು ಹಾಗೂ ಇವಿ ವಾಹನಗಳ ಬ್ಯಾಟರಿ, ಮೋಟಾರ್ ಮತ್ತು ಸೇಫ್ಟಿ ಮೆಕಾನಿಸಂ ಕುರಿತು ಪ್ರಾತ್ಯಕ್ಷಿಕೆ ಸಹಿತ ಸಮಗ್ರ ಮಾಹಿತಿ ನೀಡರು.

ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸಿದ್ಧಾಪುರ ದ್ವಿಚಕ್ರ ದುರಸ್ತಿಗಾರರ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು ಹಾಗೂ ಕರ್ನಾಟಕ ರಾಜ್ಯ ದ್ವಿಚಕ್ರ ವಾಹನ ತಂತ್ರಜ್ಞರ ಕ್ಷೇಮಾಭಿವೃದ್ಧಿ ಟ್ರಸ್ಟ್‌ನ ಪ್ರಮುಖರು ಉಪಸ್ಥಿತರಿದ್ದು, ತರಬೇತಿ ಪೂರ್ಣಗೊಳಿಸಿದ ಸದಸ್ಯರಿಗೆ ಶುಭ ಹಾರೈಸಿದರು. ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಈ ತರಬೇತಿ ಪೂರಕವಾಗಿದೆ ಎಂದು ಸಂಘದ ಪದಾಧಿಕಾರಿಗಳು ಅಭಿಪ್ರಾಯಪಟ್ಟರು.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250