ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Uttara-Kannada

ಬೃಹತ್ ಅಲೆಗಳ ಅಬ್ಬರ: ಧರೆಗುರುಳಿದ ತೆಂಗಿನ ಮರ

Pakka News Web • 17 ಆಗಸ್ಟ್ 2026,

ಕಾರವಾರ: ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಸೃಷ್ಟಿಯಾದ ಬೃಹತ್ ಅಲೆಗಳ ಅಬ್ಬರಕ್ಕೆ ತೀವ್ರ ಕಡಲ್ಕೊರೆತ ಉಂಟಾಗಿದೆ.

 ಮಹಾ ಅಲೆಗಳ ಹೊಡೆತಕ್ಕೆ ಕಡಲತೀರದಲ್ಲಿದ್ದ ಹಲವು ತೆಂಗಿನ ಮರಗಳು ಬೇರು ಸಮೇತ ಧರೆಗುರುಳಿದ್ದು, ದಡದಲ್ಲಿದ್ದ ಕೆಲವು ಶೆಡ್‌ಗಳಿಗೆ ಹಾನಿಯಾಗಿದೆ.

ಅಲೆಗಳ ರಭಸಕ್ಕೆ ದಡದ ಮಣ್ಣು ಕೊಚ್ಚಿಹೋಗಿದ್ದು,  ಅಲೆಗಳ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ ಮೀನುಗಾರರು ತಮ್ಮ ದೋಣಿ ಮತ್ತು ಬಲೆಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಪರದಾಡಿದ್ದಾರೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250