ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Uttara-Kannada

ಕಾಲುವೆಗಿಳಿದ ksrtc ಬಸ್; ಪ್ರಯಾಣಿಕರು ಪಾರು

Pakka News Web • 19 ಆಗಸ್ಟ್ 2026,

ಯಲ್ಲಾಪುರ: ಚಾಲಕನ ನಿಯಂತ್ರಣ ತಪ್ಪಿದ ಕೆಎಸ್‌ಆರ್‌ಟಿಸಿ ಬಸ್‌ವೊಂದು ರಸ್ತೆ ಬದಿಯ ಕಾಲುವೆಗೆ ಇಳಿದ ಘಟನೆ ತಾಲೂಕಿನ ವಜ್ರಳ್ಳಿ ಸಮೀಪದ ಹೊನ್ನಗದ್ದೆ ಶಾಲೆಯ ಬಳಿ ನಡೆದಿದೆ.

ಬಾಸಲ್‌ನಿಂದ ಯಲ್ಲಾಪುರದತ್ತ ತೆರಳುತ್ತಿದ್ದ ಬಸ್‌ನಲ್ಲಿ ಸ್ಥಳೀಯ ಪ್ರಯಾಣಿಕರ ಜೊತೆಗೆ ಶಾಲಾ ಮಕ್ಕಳು ಕೂಡ ಇದ್ದರು. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಂಭೀರ ಗಾಯಗಳಾಗಿಲ್ಲ.

ರಸ್ತೆ ಬದಿಯ ಕಾಲುವೆಯನ್ನು ಬಿಎಸ್‌ಎನ್‌ಎಲ್ ಕೇಬಲ್ ಅಳವಡಿಸಲು ಬಳಸಿಕೊಂಡಿರುವುದರಿಂದ ರಸ್ತೆಯಂಚು ಮತ್ತಷ್ಟು ಇಕ್ಕಟ್ಟಾಗಿದ್ದು, ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದೇ ಕಾರಣದಿಂದ ಬಸ್ ಕಾಲುವೆಗೆ ಇಳಿದಿರಬಹುದು ಎನ್ನಲಾಗಿದ್ದು, ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಆತಂಕದಲ್ಲಿದ್ದಾರೆ.

ರಸ್ತೆಯಂಚಿನಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸುವುದರ ಜೊತೆಗೆ, ಕಾಲುವೆ ಹಾಗೂ ರಸ್ತೆ ಬದಿಯ ಸ್ಥಿತಿಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಲೋಕೋಪಯೋಗಿ ಇಲಾಖೆ ಕೂಡಲೇ ರಸ್ತೆ ಬದಿಯನ್ನು ಸ್ವಚ್ಛಗೊಳಿಸಿ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250