ಕಾರವಾರ: ಕಾರವಾರ ತಾಲೂಕು ತಜ್ಞ ಛಾಯಾಗ್ರಾಹಕರು ಹಾಗೂ ವಿಡಿಯೋಗ್ರಾಫರ್‌ಗಳ ಸಂಘದ ವತಿಯಿಂದ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮ ಬುಧವಾರ ನಗರದ ಗುರುಮಠ ಬಾಡ ಸಮೀಪದ ಬೃಂದಾವನ ಹಾಲ್‌ನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಛಾಯಾಗ್ರಾಹಕರು ಹಾಗೂ ವಿಡಿಯೋಗ್ರಾಫರ್‌ಗಳ ವೃತ್ತಿ, ಅವರ ಸೃಜನಶೀಲತೆ ಮತ್ತು ಸಮಾಜದಲ್ಲಿ ಛಾಯಾಚಿತ್ರಗಳ ಮಹತ್ವದ ಕುರಿತು ಚರ್ಚಿಸಲಾಯಿತು. ಛಾಯಾಗ್ರಹಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ವೃತ್ತಿಪರರು ಹಾಗೂ ಅವರ ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮಕ್ಕೆ ಮಾಜಿ ಶಾಸಕಿ ರೂಪಾಲಿ ನಾಯ್ಕ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಮಾಜಿ ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ್, ಆರ್.ಡಿ. ಬ್ರದರ್ಸ್‌ನ ರಾಹುಲ್ ದೇವಿದಾಸ ನಾಯ್ಕ್, ಐಎನ್‌ಎಸ್ ಕದಂಬ ಅಗ್ನಿಶಾಮಕ ಠಾಣಾಧಿಕಾರಿ ಹಾಗೂ ‘ಬ್ಲಡ್ ಡೋನರ್ಸ್ ಕಾರವಾರ್’ ಸಂಸ್ಥೆಯ ಸಂಸ್ಥಾಪಕ ವಿನಾಯಕ ನಾಯ್ಕ್ ಮತ್ತು ಕನ್ನಡಪ್ರಭ ಮುಖ್ಯ ವರದಿಗಾರ ವಸಂತಕುಮಾರ ಕಟಗಲ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಛಾಯಾಗ್ರಾಹಕರು ಮತ್ತು ವಿಡಿಯೋಗ್ರಾಫರ್‌ಗಳ ವೃತ್ತಿಗೆ ಗೌರವ ಸಲ್ಲಿಸುವ ಜೊತೆಗೆ, ಅವರ ಕುಟುಂಬಗಳೊಂದಿಗೆ ಸಂಭ್ರಮ ಹಂಚಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಕಾರವಾರ ತಾಲೂಕು ತಾಜ್ನಾ ಛಾಯಾಗ್ರಾಹಕರು ಹಾಗೂ ವಿಡಿಯೋಗ್ರಾಫರ್‌ಗಳ ಸಂಘದ ಅಧ್ಯಕ್ಷರು ಬಾಲಚಂದ್ರ ತಾಮ್ಸೆ, ಉಪಾಧ್ಯಕ್ಷ ಶೈಲೇಶ್, ಕಾರ್ಯದರ್ಶಿ ಅಕ್ಷಯ ರೇವಂಡಿಕರ್, ಖಜಾಂಚಿ ಪ್ರಕಾಶ ಶೇಣ್ವಿ,ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಇದ್ದರು.
ಈ ಸಂದರ್ಭದಲ್ಲಿ ಸಂಘದಿಂದ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಬಳಿಕ ಸಿದ್ದರದ ಸುರಭಿ ವೃದ್ಧಾಶ್ರಮದಲ್ಲಿ ಆಹಾರ ಧಾನ್ಯ ಕಿಟ್ ವಿತರಣೆ ಮಾಡಲಾಯಿತು.
