ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Uttara-Kannada

ಅಡಿಕೆ ಗಿಡ ಕಡಿತ: ಅರಣ್ಯ ಇಲಾಖೆ ವಿರುದ್ಧ ಅನಂತಮೂರ್ತಿ ಹೆಗಡೆ ಆಕ್ರೋಶ

Pakka News Web • 26 ಆಗಸ್ಟ್ 2026,

ಯಲ್ಲಾಪುರ:ಮರಗಳನ್ನು ಉಳಿಸಿ, ಬೆಳೆಸುವುದು ಅರಣ್ಯ ಇಲಾಖೆಯ ಕರ್ತವ್ಯವೇ ಹೊರತು, ಬೆಳೆದ ಮರಗಳನ್ನು ಕಡಿಯುವುದಲ್ಲ. ಅಡಿಕೆ ಗಿಡಗಳನ್ನು ಕಡಿಯುವ ಹಕ್ಕನ್ನು ಇಲಾಖೆಗೆ ಯಾರು ಕೊಟ್ಟಿದ್ದಾರೆ? ಅರಣ್ಯ ಇಲಾಖೆಯ ಈ ಕ್ರಮ ಅತ್ಯಂತ ಖಂಡನೀಯ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಕುಂದರಗಿ ಪಂಚಾಯತ್ ವ್ಯಾಪ್ತಿಯ ಬೆಳ್ಳಂಬೆಯ ಸದಾಶಿವ ನಾಯ್ಕ ಅವರ ತೋಟದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಅಡಿಕೆ ಮರಗಳನ್ನು ಕಡಿದ ಜಾಗಕ್ಕೆ ಭೇಟಿ ನೀಡಿ, ಸಂತ್ರಸ್ತ ರೈತನಿಗೆ ಧೈರ್ಯ ತುಂಬಿ ಅವರು ಮಾತನಾಡಿದರು. ಸದಾಶಿವ ನಾಯ್ಕ ಅವರು ಸುಮಾರು 50 ವರ್ಷಗಳಿಂದ ಇದೇ ಜಾಗದಲ್ಲಿ ವಾಸವಿದ್ದು ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.

ಅವರು ಹತ್ತಾರು ಎಕರೆ ಜಮೀನು ಹೊಂದಿದವರಲ್ಲ. ಆದರೆ, ಅವರು ಕೂಲಿ ಕೆಲಸಕ್ಕೆ ತೆರಳಿದ್ದ ಸಮಯದಲ್ಲಿ ಬಂದ ಅರಣ್ಯಾಧಿಕಾರಿಗಳು, ಸುಮಾರು 6-7 ವರ್ಷ ಪ್ರಾಯದ ಫಲ ನೀಡುವ 40 ಅಡಿಕೆ ಗಿಡಗಳನ್ನು ಅಮಾನುಷವಾಗಿ ಕಡಿದು ಹಾಕಿರುವುದು ತೀವ್ರ ನೋವಿನ ಸಂಗತಿ. ಅರಣ್ಯ ಇಲಾಖೆಯು ಬಡ ರೈತರ ಬಗ್ಗೆ ಕನಿಕರ ತೋರಬೇಕು. ರೈತರ ಹಿತದೃಷ್ಟಿಯಿಂದ ನಾವು ಸದಾ ಅವರ ಬೆಂಬಲಕ್ಕೆ ನಿಲ್ಲುತ್ತೇವೆ ಎಂದರು.

ಈ ಸಂದರ್ಭದಲ್ಲಿ ಯಲ್ಲಾಪುರ ಬಿಜೆಪಿ ಉಪಾಧ್ಯಕ್ಷ ಗಣೇಶ ಹೆಗಡೆ, ಗ್ರಾಮ ಪಂಚಾಯತ್ ಮಾಜಿ ಮಾಜಿ ಅಧ್ಯಕ್ಷೆ ದೀಪಾ ರಾಘವೇಂದ್ರ ಸಿದ್ದಿ, ಮಾಳಕೊಪ್ಪ-ಮಂಚಿಕೇರಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಿನೇಶ ಭಟ್, ಕಾರ್ಯದರ್ಶಿ ಬಾಬಣ್ಣ ಪತ್ರಕರ್, ಮುಖಂಡರಾದ ರಾಮಕೃಷ್ಣ ಹೆಗಡೆ, ಗ್ರಾ.ಪಂ. ಮಾಜಿ ಸದಸ್ಯ ಸೀತಾರಾಮ ಗೌಡ ಹಾಗೂ ಭರಣಿ ಬೂತ್ ಅಧ್ಯಕ್ಷ ಗಂಗಾಧರ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250