ಹೊನ್ನಾವರ ಉಪ ವಿಭಾಗ ವ್ಯಾಪ್ತಿಯಲ್ಲಿ ಹೊನ್ನಾವರದ 110 ಕೆ.ವಿ ವಿದ್ಯುತ್ ವಿತರಣಾ ಕೇಂದ್ರ ವಿದ್ಯುತ್ ಪರಿವರ್ತಕ-2 ತುರ್ತು ನಿರ್ವಹಣಾ ಕೆಲಸ ವಿವಿಧ ಪ್ರದೇಶದಲ್ಲಿ ವಿದ್ಯುತ್ ಕಡಿತವಾಗಲಿದೆ.
ಕೆ.ಎಚ್.ಬಿ ಕಾಲನಿ, ಬಂದರ್ ರೋಡ್, ಎಲ್.ಐ.ಸಿ ಮತ್ತು ಕರ್ಕಿ ಫೀಡರ್ ವ್ಯಾಪ್ತಿಯಲ್ಲಿ ಹಾಗೂ ಕಾಸರಗೋಡ ಶಾಖೆಯ ಟೊಂಕಾ ಹಾಗೂ ಬಳಕೂರು ಫೀಡರಗಳ ವ್ಯಾಪ್ತಿಯಲ್ಲಿ 11 ಕೆ.ವಿ ಮಾರ್ಗದ ನಿರ್ವಹಣೆಯ ನಿಮ್ಮಿತ್ತ ವಿವಿಧ ಪ್ರದೇಶಗಳಲ್ಲಿ ಜು 8 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಹೊನ್ನಾವರ ಹೆಸ್ಕಾಂ, ಉಪ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನೀಯರ್(ವಿ) ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರವಾರದಲ್ಲೂ ಜು.9ರಂದು ವಿದ್ಯುತ್ ಕಡಿತ:
ಕಾರವಾರ ಉಪ ವಿಭಾಗದ ವ್ಯಾಪ್ತಿಯ ಪ್ರದೇಶಗಳಲ್ಲಿ ಪರಿವರ್ತಕ ಕೇಂದ್ರ ರಚನೆ, ಮಧ್ಯಂತರ ಕಂಬ ಅಳವಡಿಕೆ ಕಾಮಗಾರಿ ಇರುವುದರಿಂದ ಜು.9 ರಂದು ಬೆಳಗ್ಗೆ 10 ಗಂಟೆಯಿಂದಸಂಜೆ 4 ಗಂಟೆಯವರೆಗೆ ನಂದನಗದ್ದಾ ವಿವಿದ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಹೆಸ್ಕಾಂ, ಕಾರವಾರ, ಕಾರ್ಯ ಮತ್ತು ಪಾಲನಾ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ತಿಳಿಸಿದ್ದಾರೆ.
