ವೀರ ಬಹದ್ದೂರ ಹೆಂಜಾ ನಾಯ್ಕ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆ ಕಾರವಾರದಲ್ಲಿ ಪ್ರಸಕ್ತ ಸಾಲಿನ 1 ನೇ ಬ್ಯಾಚ್‌ಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಸೇನಾ ಆಯ್ಕೆಯ ಕುರಿತು ಲಿಖಿತ ಪರೀಕ್ಷೆಯ ತರಬೇತಿ ನೀಡಲು ತರಬೇತಿದಾರರ ಆಯ್ಕೆಗಾಗಿ ಅರ್ಹ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಸೇನಾ ಆಯ್ಕೆ ಪೂರ್ವ ತರಬೇತಿ ಹಾಗೂ ಪೋಲೀಸ್ ಇಲಾಖೆಯ ನೇಮಕಾತಿಗಳ ಬಗ್ಗೆ ಅಭ್ಯರ್ಥಿಗಳಿಗೆ ತರಬೇತಿ ನೀಡಿ, ಅನುಭವ ಹೊಂದಿರುವವರು ಕಚೇರಿಯನ್ನು ಸಂಪರ್ಕಿಸಿ, ನಮೂನೆಯನ್ನು ಪಡೆದು, ಅರ್ಜಿಗಳನ್ನು ಮುಚ್ಚಿದ ಲಕೋಟೆಗಳಲ್ಲಿ ಜು.27 ರಂದು ಸಂಜೆ 4.30 ಗಂಟೆಯೊಳಗಾಗಿ ಜಿಲ್ಲಾ ಅಧಿಕಾರಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣ, ನೆಲಮಹಡಿ ಕೊಠಡಿ ಸಂಖ್ಯೆ:1 ಕಾರವಾರ 581301 ಕಾರ್ಯಾಲಯಕ್ಕೆ ತಲುಪಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಕಚೇರಿ ಅವಧಿಯಲ್ಲಿ ದೂ.ಸಂ: 08382-226588 ನ್ನು ಸಂಪರ್ಕಿಸುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
