ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Uttara-Kannada

ಅಪ್ರಾಪ್ತನ ಕೈಗೆ ವಾಹನ ಕೊಟ್ಟವನಿಗೆ ನ್ಯಾಯಾಲಯದ ಚಾಟಿ: 25,000ರೂ. ದಂಡ!

Pakka News Web • 23 ಜುಲೈ 2026,

ಅಪ್ರಾಪ್ತ ವಯಸ್ಕರ ಕೈಗೆ ವಾಹನ ನೀಡುವುದು ಎಷ್ಟು ಅಪಾಯಕಾರಿಯೋ, ಕಾನೂನಿನ ಕಣ್ಣಿನಲ್ಲಿ ಅಷ್ಟೇ ದೊಡ್ಡ ಅಪರಾಧ ಎಂಬುದಕ್ಕೆ ಯಲ್ಲಾಪುರದಲ್ಲಿ ನಡೆದ ಈ ಘಟನೆ ಸ್ಪಷ್ಟ ನಿದರ್ಶನ. ಹುಬ್ಬಳ್ಳಿಯ ವಾಹನ ಮಾಲೀಕರಾದ ಅರವಿಂದ ದತ್ತಾತ್ರೇಯ ಪವಾರ್ ಎಂಬುವರು ತಮ್ಮ ಕೆ.ಎ.03 ಇ.ಎಂ.2834 ನೋಂದಣಿ ಸಂಖ್ಯೆಯ ವಾಹನವನ್ನು ನಿಯಮ ಮೀರಿ ಬಾಲಕನೊಬ್ಬನ ಚಾಲನೆಗೆ ನೀಡಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿದ ಯಲ್ಲಾಪುರ ಪೊಲೀಸರು ತಕ್ಷಣವೇ ಪ್ರಕರಣ ದಾಖಲಿಸಿಕೊಂಡಿದ್ದರು. ಬುಧವಾರ ಈ ಪ್ರಕರಣದ ವಿಚಾರಣೆ ನಡೆಸಿದ ಯಲ್ಲಾಪುರದ ಸಿವಿಲ್ ನ್ಯಾಯಾಧೀಶರಾದ ಅನಿತಾಕುಮಾರಿ ಎಸ್. ಅವರು, ವಾಹನ ಮಾಲೀಕರಿಗೆ ಭಾರಿ ಮೊತ್ತದ ಅಂದರೆ 25,000 ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಅಷ್ಟೇ ಅಲ್ಲದೆ, ಅಪ್ರಾಪ್ತರಿಗೆ ವಾಹನ ಚಾಲನೆ ಮಾಡಲು ಕೊಡುವುದು ಅಕ್ಷಮ್ಯ ಅಪರಾಧ ಎಂಬುದನ್ನು ಕಟ್ಟುನಿಟ್ಟಾಗಿ ನೆನಪಿಸುವ ಮೂಲಕ ಬೇಜವಾಬ್ದಾರಿ ವಾಹನ ಮಾಲೀಕರಿಗೆ ಸೂಕ್ತ ಪಾಠ ಕಲಿಸಿದ್ದಾರೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250