ಜುಲೈ 28, 2026
ಮಂಗಳವಾರ

ನಮ್ಮನ್ನು ಅನುಸರಿಸಿ

Uttara-Kannada

ಕಟ್ಟಿಗೆ ರಾಶಿಯಲ್ಲಿತ್ತು ಬೃಹತ್ ಗಾತ್ರದ ಕಾಳಿಂಗ: ಜನರಲ್ಲಿ ಆತಂಕ!

Pakka News Web • 27 ಜುಲೈ 2026,

​ಮನೆಯಂಗಳದಲ್ಲಿದ್ದ ಕಟ್ಟಿಗೆ ರಾಶಿಯನ್ನು ಸರಿಸಲು ಹೋದ ಮನೆಯವರಿಗೆ ಎದುರಾಗಿದ್ದು ಸಾಮಾನ್ಯ ದೃಶ್ಯವಲ್ಲ, ಅಲ್ಲಿದ್ದುದ್ದು ಬೃಹತ್ ಗಾತ್ರದ 12 ಅಡಿ ಕಾಳಿಂಗ ಸರ್ಪ! ಅಂಕೋಲಾ ತಾಲೂಕಿನ ಮಾರುಗದ್ದೆ ಗ್ರಾಮದ ಗಣಪ ರಾಮಗೌಡ ಅವರ ಮನೆಯಲ್ಲಿ ಈ ಆತಂಕದ ಘಟನೆ ನಡೆದಿದೆ.

ಕಾಳಿಂಗ ಸರ್ಪವನ್ನು ಕಂಡು ಬೆಚ್ಚಿಬಿದ್ದ ಕುಟುಂಬಸ್ಥರು ತಕ್ಷಣ ಹಾವು ರಕ್ಷಕ ಮಹೇಶ್ ನಾಯ್ಕ್ ಅವರಿಗೆ ಮಾಹಿತಿ ನೀಡಿದರು. ಕ್ಷಣಾರ್ಧದಲ್ಲಿ ಸ್ಥಳಕ್ಕೆ ಧಾವಿಸಿದ ಮಹೇಶ್ ನಾಯ್ಕ್ ಹಾಗೂ ಅವರ ಪುತ್ರ ಗಗನ್ ನಾಯ್ಕ್, ಪ್ರಾಣದ ಹದನೋಡದೆ ಅತ್ಯಂತ ಜಾಗರೂಕತೆಯಿಂದ ಕಾರ್ಯಾಚರಣೆ ನಡೆಸಿ ಸರ್ಪವನ್ನು ಬಲೆಯೊಳಗೆ ಸೆರೆಹಿಡಿದರು.

​ನಂತರ ಅರಣ್ಯ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಹಾವನ್ನು ದಟ್ಟ ಅರಣ್ಯಕ್ಕೆ ಸುರಕ್ಷಿತವಾಗಿ ಬಿಡಲಾಯಿತು. ಸ್ಥಳೀಯರಾದ ಹರಿಶ್ಚಂದ್ರ, ಅಭಿಷೇಕ್ ಹಾಗೂ ತುಳಸಿದಾಸ್ ರಕ್ಷಣಾ ಕಾರ್ಯಕ್ಕೆ ನೆರವಾದರು. ಸಮಯೋಚಿತವಾಗಿ ಸ್ಪಂದಿಸಿ ಭೀಕರ ಹಾವನ್ನು ರಕ್ಷಿಸಿದ ತಂದೆ-ಮಗನ ಸಾಹಸಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250