ಗಂಡನ ಮನೆಗೆ ಹೋಗುವುದಾಗಿ ಹೇಳಿ ತೆರಳಿದ್ದ 27 ವರ್ಷದ ಮಹಿಳೆಯೊಬ್ಬರು ದಿಢೀರ್ ಕಾಣೆಯಾಗಿರುವ ಘಟನೆ ವರದಿಯಾಗಿದೆ. ಶಿರಸಿಯ ಮರಾಠಿ ಕೊಪ್ಪ ನಿವಾಸಿ ಸನ್ನಿಕುಮಾರ ನಾಯ್ಕ ಎಂಬುವವರ ಪತ್ನಿ ಐಶ್ವರ್ಯ ಕಾಣೆಯಾದ ಮಹಿಳೆಯಾಗಿದ್ದಾರೆ.
ಗೋಧಿ ಮೈಬಣ್ಣ, ದುಂಡನೆಯ ಮುಖ ಹಾಗೂ ಸುಮಾರು 5.4 ಅಡಿ ಎತ್ತರವಿರುವ ಈಕೆ, ಮನೆಯಿಂದ ತೆರಳುವಾಗ ಹಸಿರು ಬಣ್ಣದ ಚೂಡಿದಾರ, ಹಸಿರು ಪ್ಯಾಂಟ್ ಹಾಗೂ ಕೆಂಪು ಬಣ್ಣದ ವೇಲ್ (ದುಪಟ್ಟಾ) ಧರಿಸಿದ್ದರು. ಕನ್ನಡ, ಹಿಂದಿ ಮತ್ತು ಕೊಂಕಣಿ ಭಾಷೆಗಳನ್ನು ಸುಲಲಿತವಾಗಿ ಮಾತನಾಡುವ ಇವರು, ಗಂಡನ ಮನೆಗೆ ತೆರಳುವುದಾಗಿ ಹೇಳಿ ಹೋದವರು ಇದುವರೆಗೆ ಮನೆಗೆ ಮರಳದೆ ನಾಪತ್ತೆಯಾಗಿದ್ದಾರೆ.
ಈ ಚಹರೆಯ ಮಹಿಳೆಯ ಬಗ್ಗೆ ಯಾವುದೇ ರೀತಿಯ ಮಾಹಿತಿ ಅಥವಾ ಸುಳಿವು ದೊರೆತಲ್ಲಿ ಸಾರ್ವಜನಿಕರು ತಕ್ಷಣವೇ ಕಾರವಾರ ಪೊಲೀಸ್ ಕಂಟ್ರೋಲ್ ರೂಮ್ (08382-226550), ಮುಂಡಗೋಡ ಪೊಲೀಸ್ ಠಾಣೆ (08301-222211) ಅಥವಾ ಮುಂಡಗೋಡ ಪಿ.ಎಸ್.ಐ. (9480805275), ಪಿ.ಐ. (9480805258) ಅವರ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸುವಂತೆ ಮುಂಡಗೋಡ ಪೊಲೀಸ್ ತನಿಖಾಧಿಕಾರಿಗಳು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
