ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Uttara-Kannada

ಗ್ರಾಮ ಪಂಚಾಯತ್‌ಗಳ ಪ್ರಾದೇಶಿಕ ಚುನಾವಣಾ ಕ್ಷೇತ್ರ ವಿಭಜನೆ: ಆಕ್ಷೇಪಣೆ ಆಹ್ವಾನ

Pakka News Web • 15 ಜೂನ್ 2026,

ಹೊನ್ನಾವರ: ತಾಲೂಕಿನ ಕೋಟಾ ಮತ್ತು ಹಡಿಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರದೇಶಗಳನ್ನು, ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಾಗಿ ವಿಂಗಡಿಸಿ, ಸದಸ್ಯ ಸ್ಥಾನಗಳನ್ನು ಹಂಚಿಕೆ ಮಾಡಲಾದ ಕರಡು ಅಧಿಸೂಚನೆಯನ್ನು ಹೊರಡಿಸಿದೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.
ಈ ಕರಡು ಅಧಿಸೂಚನೆಯಿಂದ ಬಾಧಿತರಾಗಬಹುದಾದ ಸಾರ್ವಜನಿಕರು ತಮ್ಮ ಆಕ್ಷೇಪಣೆಗಳನ್ನು ಜೂನ್ 22 ರ ಸಂಜೆ 5 ಗಂಟೆಯೊಳಗೆ ಜಿಲ್ಲಾಧಿಕಾರಿಗಳ ಕಚೇರಿ ಅಥವಾ ಹೊನ್ನಾವರ ತಹಶೀಲ್ದಾರ್ ಕಚೇರಿಯಲ್ಲಿ ಸಲ್ಲಿಸಬಹುದಾಗಿದ್ದು, ನಂತರ ಬರುವ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.

ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾದ ಕರಡು ಪ್ರತಿಯ ಮಾಹಿತಿ


ಕೋಟಾ ಗ್ರಾಮ ಪಂಚಾಯತ್ ಒಟ್ಟು ಕ್ಷೇತ್ರಗಳು: 4 ಕೋಟಾ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯು ಕೋಟಾ ಮಜರೆ, ಕೋಟಾ, ಅರೆಸುಳ್ಯಕೋಟಾ, ತುಂಬೇಬೀಳು, ಸುಳೀಬೀಳು ಹಾಗೂ ಸಂಪೋಳ್ಳಿ ಗ್ರಾಮಗಳ ವ್ಯಾಪ್ತಿಯನ್ನು ಹೊಂದಿದ್ದು, 3 ಸದಸ್ಯ ಸ್ಥಾನವನ್ನು ಹಂಚಿಕೆ ಮಾಡಲಾಗಿದೆ. ಹೆರಾಳಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಗೆ , ಹೆರಾಳಿ ಮಜರೆ, ಹೆರಾಳಿ, ಮುಂಡರಮಾವ ಗ್ರಾಮ ಕುಚ್ಚೋಡಿ ಪೂರ್ತಿ ವ್ಯಾಪ್ತಿಯನ್ನು ಹೊಂದಿದ್ದು, 1 ಸದಸ್ಯ ಸ್ಥಾನವನ್ನು ಹಂಚಿಕೆ ಮಾಡಲಾಗಿದೆ.
ಹಡಿಕಲ್ ಗ್ರಾಮ ಪಂಚಾಯಿತಿಗೆ ಒಟ್ಟು ಕ್ಷೇತ್ರಗಳು 6 ದಬ್ಬೋಡ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಗೆ ದಬ್ಬೋಡ ಮಜರೆ, ದಬ್ಬೋಡ, ಕೆರೆಕುಳಿ, ತುರುಮೆ ವ್ಯಾಪ್ತಿಯನ್ನು ಹೊಂದಿದ್ದು, 1 ಸದಸ್ಯ ಸ್ಥಾನವನ್ನು ಹಂಚಿಕೆ ಮಾಡಲಾಗಿದೆ.
ಆಡುಕಳ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಗೆ, ಆಡುಕಳ ಭಾಗಶಃ ಮಜರೆ, ಬಾಳಗಟ್ಟು, ಮಡಕಿಗದ್ದೆ, ಶೀಗಡಿ, ಅಮ್ಮಾರು, ಆಡುಕಳ, ಕಲ್ಲಂಚು ವ್ಯಾಪ್ತಿಯನ್ನು ಹೊಂದಿದ್ದು, 2 ಸದಸ್ಯ ಸ್ಥಾನವನ್ನು ಹಂಚಿಕೆ ಮಾಡಲಾಗಿದೆ. ಹಡಿಕಲ್ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಗೆ ಹಡಿಕಲ್ ಪೂರ್ತಿ, ಆಡುಕಳ ಭಾಗಶಃ ಮಜರೆ, ಯತ್ನಳ್ಳಿ, ನೆಸಲನೀರು ವ್ಯಾಪ್ತಿಯನ್ನು ಹೊಂದಿದ್ದು, 1 ಸದಸ್ಯ ಸ್ಥಾನವನ್ನು ಹಂಚಿಕೆ ಮಾಡಲಾಗಿದೆ. ಅಡ್ಕೆಕುಳಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಗೆ ಅಡ್ಕೆಕುಳಿ ಮಜರೆ ವ್ಯಾಪ್ತಿಯನ್ನು ಹೊಂದಿದ್ದು, 1 ಸದಸ್ಯ ಸ್ಥಾನವನ್ನು ಹಂಚಿಕೆ ಮಾಡಲಾಗಿದೆ. ಅಶಿಕೇರಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಗೆ ಅಡ್ಕೆಕುಳಿ ಮಜರೆ, ಹಾಲಳ್ಳಿ, ಮುರಗೋಳಿ ಮತ್ತು ಅಶಿಕೇರಿ ಪೂರ್ತಿ ಗ್ರಾಮಗಳ ವ್ಯಾಪ್ತಿಯನ್ನು ಹೊಂದಿದ್ದು, 1 ಸದಸ್ಯ ಸ್ಥಾನವನ್ನು ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250