ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Crime

ನಾಪತ್ತೆಯಾದ ಪೂನಮ್, ಸಾಗರ! ಪೊಲೀಸರು ನೀಡಿದ ಮಾಹಿತಿ ಏನು?

Pakka News Web • 13 ಆಗಸ್ಟ್ 2026,

ಕಾರವಾರ: ನಗರದ ನಂದನಗದ್ದಾದಲ್ಲಿರುವ ಪ್ರಸಿದ್ಧ ಪ್ರೀಮಿಯರ್ ಸೈನ್ಸ್ ಆಂಡ್ ಕಾಮರ್ಸ್ ಪದವಿ ಪೂರ್ವ ಕಾಲೇಜಿನ ಇಬ್ಬರು ದ್ವಿತೀಯ ಪಿ.ಯು.ಸಿ ಕಾಮರ್ಸ್ ವಿದ್ಯಾರ್ಥಿಗಳು ಜೂನ್ 24 ರಂದು ಕಾಲೇಜಿಗೆ ತೆರಳಿದವರು ವಾಪಸ್ಸಾಗದೇ ದಿಢೀರ್ ನಾಪತ್ತೆಯಾಗಿದ್ದು, ಪೋಷಕರಲ್ಲಿ ಹಾಗೂ ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ. 

ಕಾಣೆಯಾದ 16 ವರ್ಷದ ವಿದ್ಯಾರ್ಥಿನಿ ಪೂನಮ್ ಜಿತೇಂದ್ರ ವೈಷ್ಣವ್ ಸುಮಾರು 5.6 ಅಡಿ ಎತ್ತರ, ಸಾಧಾರಣ ಮೈಕಟ್ಟು ಹಾಗೂ ಬಿಳಿ ಮೈಬಣ್ಣ ಹೊಂದಿದ್ದಾಳೆ. ಈಕೆ ಹಿಂದಿ, ರಾಜಸ್ತಾನಿ, ಕೊಂಕಣಿ ಮತ್ತು ಇಂಗ್ಲಿಷ್ ಭಾಷೆಗಳನ್ನು ಸರಾಗವಾಗಿ ಮಾತನಾಡಬಲ್ಲವಳಾಗಿದ್ದು, ನಾಪತ್ತೆಯಾದ ಸಮಯದಲ್ಲಿ ಬಿಳಿ ಬಣ್ಣದ ಚೂಡಿದಾರ ಟಾಪ್ ಹಾಗೂ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದಳು.

ಇನ್ನು ಇದೇ ಕಾಲೇಜಿನ 17 ವರ್ಷದ ವಿದ್ಯಾರ್ಥಿ ಸಾಗರ ಬಿಷನುಪದ ಪೋರಿಯಾ ಸಹ ಕಾಣೆಯಾಗಿದ್ದಾನೆ. 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು ಮತ್ತು ಗೋಧಿ ಮೈಬಣ್ಣ ಹೊಂದಿರುವ ಈತ ಹಿಂದಿ, ಬಂಗಾಲಿ, ಕೊಂಕಣಿ ಹಾಗೂ ಇಂಗ್ಲಿಷ್ ಭಾಷೆಗಳನ್ನು ಮಾತನಾಡುತ್ತಾನೆ. ಈತ ಬೂದು (Grey) ಬಣ್ಣದ ಟೀ ಶರ್ಟ್ ಹಾಗೂ ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದನು.

ಈ ಇಬ್ಬರೂ ವಿದ್ಯಾರ್ಥಿಗಳ ಕುರಿತು ಯಾವುದೇ ಸುಳಿವು ಸಿಕ್ಕಲ್ಲಿ ಅಥವಾ ಸಾರ್ವಜನಿಕರಿಗೆ ಕಂಡುಬಂದಲ್ಲಿ ತಕ್ಷಣವೇ ಕಾರವಾರ ಮಹಿಳಾ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ (ಮೊ: 8277987514), ಪಿ.ಎಸ್.ಐ (ಮೊ: 8277987555) ಅಥವಾ ಕಾರವಾರ ಪೊಲೀಸ್ ಕಂಟ್ರೋಲ್ ರೂಮ್ (ಮೊ: 9480805200) ಸಂಖ್ಯೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ. ಅಪ್ರಾಪ್ತರು ನಾಪತ್ತೆಯಾಗಿ ಒಂದುವರೆ ತಿಂಗಳ ಬಳಿಕ ಪೊಲೀಸರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250