ಕಾರವಾರ ಯೋಜನಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಪದವಿ ಹೊಂದಿದ ಅಭ್ಯರ್ಥಿಗಳಿಗೆ ಖಾಸಗಿ ಕಂಪನಿಯಾದ ಐ.ಸಿ.ಐ.ಸಿ.ಐ ಬ್ಯಾಂಕ್ ನಲ್ಲಿ ಖಾಲಿ ಇರುವ ಸೇಲ್ಸ್ ಮತ್ತು ರಿಲೇಶನ್ ಶಿಪ್ ಮ್ಯಾನೇಜರ್ ಹುದ್ದೆಗೆ ಸೆ.5 ರಂದು ನೇರ ಸಂದರ್ಶನವನ್ನು ಯೋಜನಾ ವಿನಿಮಯ ಕಚೇರಿ, ಪ್ರೇಮಾಬಾಯಿ ರಾಯ್ಕರ ಬಿಲ್ಡಿಂಗ್, ಪಂಜಾಬ್ ನ್ಯಾಶನಲ್ ಬ್ಯಾಂಕ್ ಹತ್ತಿರ, ಸಿವಿಲ್ ಕೋರ್ಟ್ ರಸ್ತೆ, ಕಾರವಾರದಲ್ಲಿ ಆಯೋಜಿಲಾಗಿದೆ.
ಈ ಸಂದರ್ಶನದಲ್ಲಿ 18 ರಿಂದ 25 ವರ್ಷದ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. ಉದ್ಯೋಗದ ಸ್ಥಳ ಉತ್ತರ ಕನ್ನಡ ಜಿಲ್ಲೆ, ಹುಬ್ಬಳ್ಳಿ, ಬೆಳಗಾವಿ. ಆಸಕ್ತ ಅಭ್ಯರ್ಥಿಗಳು ರೆಸ್ಯೂಮ್ ಪ್ರತಿಯೊಂದಿಗೆ, ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಯೋಜನಾ ವಿನಿಮಯ ಕಚೇರಿಗೆ ಖುದ್ದಾಗಿ ಅಥವಾ ಮೊ. ಸಂಖ್ಯೆ 8310044796 ಅಥವಾ ಕಚೇರಿ ದೂ.ಸಂಖ್ಯೆ 08382-226386 ಗೆ ಸಂಪರ್ಕಿಸುವAತೆ ಕಾರವಾರ ಯೋಜನಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬ್ಯಾಂಕಿನಲ್ಲಿ ಉದ್ಯೋಗ ಬೇಕೇ? ಹೀಗೆ ಮಾಡಿ
