ಕಾರವಾರ ನೇವಲ್ ಬೇಸ್‌ನಲ್ಲಿ ಕೆಲಸ ಮಾಡುತ್ತಿರುವ ಮನೋಜ್ ರೀಪು ನಾಯ್ಕ (37) ಎಂಬವರು ನಾಪತ್ತೆಯಾಗಿದ್ದಾರೆ.ಅವರ ಪತ್ತೆಗೆ ಕಾರವಾರ ಶಹರ ಪೊಲೀಸ್ ಠಾಣೆ ಮನವಿ ಮಾಡಿದೆ.
ನಾರಗೇರಿ, ಶಿರವಾಡ ನಿವಾಸಿಯಾಗಿರುವ ಮನೋಜ್ ನಾಯ್ಕ ಅವರು ಆಗಸ್ಟ್ 26ರಂದು ಬೆಳಗ್ಗೆ 5 ಗಂಟೆಗೆ ಕಾರವಾರದ ದೇವಳಿವಾಡದಿಂದ ಅಂಕೋಲಾದ ಬಾಳೆಗುಳಿಯಲ್ಲಿ ಕೆಲಸವಿದೆ ಎಂದು ಹೇಳಿ ಮನೆಯಿಂದ ತೆರಳಿದ್ದರು. ಆದರೆ ಬಳಿಕ ಮನೆಗೆ ಮರಳದೆ, ಯಾರಿಗೂ ಮಾಹಿತಿ ನೀಡದೆ ಕಾಣೆಯಾಗಿದ್ದಾರೆ.
ಕಾಣೆಯಾದ ವ್ಯಕ್ತಿಯು ಬಿಳಿ ಗೋಧಿ ಬಣ್ಣದ ಚರ್ಮ, ದುಂಡನೆಯ ಮುಖ, ಸಾಧಾರಣ ತೆಳ್ಳನೆಯ ಮೈಕಟ್ಟು ಹಾಗೂ ಸುಮಾರು 6 ಅಡಿ ಎತ್ತರ ಹೊಂದಿದ್ದಾರೆ. ಮನೆಯಿಂದ ತೆರಳುವ ಸಂದರ್ಭದಲ್ಲಿ ಬಿಳಿ ಬಣ್ಣದ ಫುಲ್ ತೋಳಿನ ಶರ್ಟ್ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದರು. ಕನ್ನಡ, ಹಿಂದಿ ಹಾಗೂ ಕೊಂಕಣಿ ಭಾಷೆ ಮಾತನಾಡುತ್ತಾರೆ.
ಈ ಚಹರೆಯುಳ್ಳ ವ್ಯಕ್ತಿ ಯಾರಿಗಾದರೂ ಪತ್ತೆಯಾದಲ್ಲಿ ಅಥವಾ ಅವರ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಕೂಡಲೇ ಕಾರವಾರ ಶಹರ ಪೊಲೀಸ್ ಠಾಣೆ: 9480805230 ಅಥವಾ ಕಾರವಾರ ಪೊಲೀಸ್ ಉಪನಿರೀಕ್ಷಕರು: 08382-226333 ಸಂಖ್ಯೆಗೆ ಸಂಪರ್ಕಿಸುವಂತೆ ಕಾರವಾರ ಶಹರ ಪೊಲೀಸ್ ಠಾಣೆಯ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
