ಅಕ್ಟೋಬರ್ 25, 2026
ಭಾನುವಾರ

ನಮ್ಮನ್ನು ಅನುಸರಿಸಿ

Crime

ಚಿಕ್ಕ ಗಲಾಟೆಗೆ ಕತ್ತಿ ಎತ್ತಿದ ಯುವಕ!

Pakka News Web • 27 ಸೆಪ್ಟೆಂ 2026,

ಕಾರವಾರ: ಗಣೇಶ ಮೂರ್ತಿ ವಿಸರ್ಜನೆ ವೇಳೆ ಕೀಟಲೆ ಮಾಡುತ್ತಿದ್ದ ವ್ಯಕ್ತಿಗೆ ಬುದ್ಧಿವಾದ ಹೇಳಿದ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ಮೇಲೆ ಕತ್ತಿಯಿಂದ ಹಲ್ಲೆಗೆ ಯತ್ನಿಸಿದ ಘಟನೆ ಅಸ್ನೋಟಿಯ ಭಗತವಾಡದಲ್ಲಿ ನಡೆದಿದೆ.

ಘಟನೆಯಲ್ಲಿ ರೋಷನ್ ದೀಪಕ ನಾಯ್ಕ (32) ಗಾಯಗೊಂಡಿದ್ದು, ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಶರದ್ ನಾಯ್ಕ ಹಾಗೂ ದೀಪಕ ನಾಯ್ಕ ವಿರುದ್ಧ ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೆ.24ರಂದು ಗಣೇಶ ವಿಸರ್ಜನೆ ವೇಳೆ ಕೀಟಲೆ ಮಾಡುತ್ತಿದ್ದ ಶರದ್‌ಗೆ, ರೋಷನ್ ಹಾಗೂ ಸಿದ್ದಾರ್ಥ ಗೋಸಾವಿ ಬುದ್ಧಿವಾದ ಹೇಳಿದ್ದರು ಎನ್ನಲಾಗಿದೆ. ಬಳಿಕ ನಡೆದ ಜಗಳದ ವಿಚಾರವನ್ನು ಶರದ್‌ನ ತಂದೆಗೆ ತಿಳಿಸಲು ರೋಷನ್ ಹಾಗೂ ಸಿದ್ದಾರ್ಥ ಸೆ.26ರಂದು ಮನೆಗೆ ತೆರಳಿದ್ದರು. ಈ ವೇಳೆ ಶರದ್ ಕತ್ತಿ ಹಿಡಿದು ಇಬ್ಬರ ಮೇಲೂ ಹಲ್ಲೆಗೆ ಮುಂದಾದನೆಂದು ದೂರಿನಲ್ಲಿ ಆರೋಪಿಸಲಾಗಿದೆ.

ಹಲ್ಲೆಯಲ್ಲಿ ರೋಷನ್ ಹಾಗೂ ಸಿದ್ದಾರ್ಥ ಗಾಯಗೊಂಡಿದ್ದು, ಜೀವ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಚಿತ್ತಾಕುಲಾ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250