ಅಕ್ಟೋಬರ್ 26, 2026
ಸೋಮವಾರ

ನಮ್ಮನ್ನು ಅನುಸರಿಸಿ

Crime

ಹೈ-ಟೆನ್ಷನ್ ವಿದ್ಯುತ್ ತಂತಿ ತಗುಲಿ ಕಾರ್ಮಿಕ ದುರ್ಮರಣ!

Pakka News Web • 26 ಆಕ್ಟೋ 2026,

ಯಲ್ಲಾಪುರ: ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ ಪರಿಣಾಮ, ಹೈ-ಟೆನ್ಷನ್ ವಿದ್ಯುತ್ ತಂತಿ ತಗುಲಿ ಕಾರ್ಮಿಕನೊಬ್ಬ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಯಲ್ಲಾಪುರ ತಾಲೂಕಿನ ಕಣ್ಣಿಗೇರಿ ಗ್ರಾಮದಲ್ಲಿ ಸಂಭವಿಸಿದೆ

ಧಾರವಾಡ ಜಿಲ್ಲೆಯ ಕಲ್ಘಟಗಿಯ ರತ್ನಪ್ಪ ಲಮಾಣಿ (36) ಮೃತಪಟ್ಟ ದುರದೃಷ್ಟಕರ ಕಾರ್ಮಿಕ. ಪವರ್ ಗ್ರಿಡ್ ಕಾಂಟ್ರಾಕ್ಟರ್ ಅಚ್ಯುತನ ಶ್ರೀನಿವಾಸನ ಹಾಗೂ ಧಾರವಾಡ ಮೂಲದ ಮ್ಯಾನೇಜರ್ ಮತ್ತು ಸೂಪರ್‌ವೈಸರ್ ಸೇರಿ 12 ಜನ ಕಾರ್ಮಿಕರನ್ನು ಕೆಲಸಕ್ಕೆ ಕರೆದುಕೊಂಡು ಬಂದಿದ್ದರು.  ದಿನಾಂಕ 24/10/2026 ರಂದು ಮಧ್ಯಾಹ್ನ 12:30 ಗಂಟೆಗೆ ಯಲ್ಲಾಪುರ ತಾಲೂಕಿನ ಕಣ್ಣಿಗೇರಿ ಗ್ರಾಮದ ತಿಮ್ಮಾಪುರ ಏರಿಯಾದಲ್ಲಿ ಹಾದುಹೋಗಿರುವ ನಾಜಗೇರಿ-ಕೊಡಸೆ ಹೈ-ಪವರ್ ವಿದ್ಯುತ್ ಲೈನ್ ಕೆಳಗಡೆ ಬೆಳೆದ ಗಿಡ-ಮರಗಳ ರೆಂಬೆಗಳನ್ನು ಕತ್ತರಿಸುವಂತೆ ಕಾರ್ಮಿಕರಿಗೆ ಸೂಚಿಸಲಾಗಿತ್ತು.

ಯಾವುದೇ ಸುರಕ್ಷತಾ ಉಪಕರಣಗಳನ್ನು ನೀಡದೆ ಕೆಲಸಕ್ಕೆ ಇಳಿಸಿದ ಪರಿಣಾಮ, ರತ್ನಪ್ಪ ಅವರು ಬಿದಿರು ಕತ್ತರಿಸುವಾಗ ಹೈ-ಟೆನ್ಷನ್ ವಿದ್ಯುತ್ ಪ್ರವಾಹ ಬಿದಿರಿಗೆ ಹರಿದು ತಾಗಿದ್ದರಿಂದ ಸ್ಥಳದಲ್ಲೇ ಅಸು ನೀಗಿದ್ದಾರೆ.  ಪತಿಯ ಸಾವಿಗೆ ಕಾಂಟ್ರಾಕ್ಟರ್, ಮ್ಯಾನೇಜರ್ ಹಾಗೂ ಸೂಪರ್‌ವೈಸರ್ ಅವರ ನಿರ್ಲಕ್ಷ್ಯವೇ ಕಾರಣವೆಂದು ಮೃತನ ಪತ್ನಿ ನೀಡಿದ ದೂರಿನನ್ವಯ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250