ಕಾರವಾರ:ಉತ್ತರಕನ್ನಡ ಜಿಲ್ಲಾ ಪೊಲೀಸ್ ಘಟಕದ ಒಟ್ಟು 25 ಪೊಲೀಸ್ ಸಿಬ್ಬಂದಿಗಳನ್ನು ಅವರ ಪರಸ್ಪರ ಹಾಗೂ ಸ್ವಂತ ಕೋರಿಕೆ ಮೇರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಅವರು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಜೂನ್ 25 ರಂದು ಹೊರಡಿಸಲಾದ ಈ ಅಧಿಕೃತ ಆದೇಶದ ಪ್ರಕಾರ, ವರ್ಗಾವಣೆಗೊಂಡ ಸಿಬ್ಬಂದಿಗಳನ್ನು ಅವರ ಪ್ರಸ್ತುತ ಕರ್ತವ್ಯದ ಠಾಣೆಯಿಂದ ಕೂಡಲೇ ಬಿಡುಗಡೆಗೊಳಿಸಿ, ನಿಯೋಜಿಸಲಾದ ಹೊಸ ಠಾಣೆಗಳಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.

ಈ ಆದೇಶದ ಅನ್ವಯ, ನಾಗರಾಜು ಎಸ್. ಒಂಟಿಗೋಡಿ ಅವರನ್ನು ಮಂಕಿಯಿಂದ ಭಟ್ಕಳ ಗ್ರಾಮೀಣ ಠಾಣೆಗೆ, ಗೋಪಾಲ ಶ್ರೀಗಿರಿ ಅವರನ್ನು ಅಂಬಿಕಾನಗರದಿಂದ ಯಲ್ಲಾಪುರಕ್ಕೆ, ಬಸವರಾಜು ಮ್ಯಾಗೇರಿ ಅವರನ್ನು ಶಿರಸಿ ಎನ್.ಎಮ್‌ನಿಂದ ಮುಂಡಗೋಡಕ್ಕೆ, ಸತೀಶ ಬಾಂಡೇಕರ ಅವರನ್ನು ಜೋಯಿಡಾದಿಂದ ದಾಂಡೇಲಿ ಗ್ರಾಮೀಣಕ್ಕೆ ಹಾಗೂ ಕಲ್ಪನಾ ಎಸ್. ನಾಯ್ಕ ಅವರನ್ನು ದಾಂಡೇಲಿ ಗ್ರಾಮೀಣದಿಂದ ಅಂಬಿಕಾನಗರಕ್ಕೆ ವರ್ಗಾಯಿಸಲಾಗಿದೆ. ಹಾಗೆಯೇ ಮಂಕಾಳ ವಿ. ಗೌಡ (ಅಂಬಿಕಾನಗರದಿಂದ ದಾಂಡೇಲಿ ಗ್ರಾಮೀಣ), ಮಹೇಶ ಗಾವಡಿ (ದಾಂಡೇಲಿ ಗ್ರಾಮೀಣದಿಂದ ಅಂಬಿಕಾನಗರ), ಅಬ್ದುಲ್ ಎಂ. ಪಟೇಲ್ (ದಾಂಡೇಲಿ ಗ್ರಾಮೀಣದಿಂದ ಹಳಿಯಾಳ), ಮಧುಕರ ಎನ್. ನಾಯ್ಕ (ಹಳಿಯಾಳದಿಂದ ದಾಂಡೇಲಿ ಗ್ರಾಮೀಣ), ಪವಿತ್ರಾ ಎಮ್ ಮಡಿವಾಳ (ಕಾರವಾರ ಶಹರದಿಂದ ಯಲ್ಲಾಪುರ) ಮತ್ತು ಕಾವ್ಯ ಟಿ. ಅವರನ್ನು ರಾಮನಗರದಿಂದ ಶಿರಸಿ ಸಂಚಾರ ಠಾಣೆಗೆ ನಿಯೋಜಿಸಲಾಗಿದೆ.
ಜೊತೆಗೆ ದರ್ಶನ ಎಸ್ ಹೆಚ್ ಅವರನ್ನು ಸಿಪಿಐ ಜೋಯಿಡಾ ಕಛೇರಿಯಿಂದ ಭಟ್ಕಳ ಶಹರಕ್ಕೆ, ಲಲಿತಾ ಹಳ್ಳಿ ಅವರನ್ನು ರಾಮನಗರದಿಂದ ಹಳಿಯಾಳಕ್ಕೆ, ವಿನಯ ಎನ್ ನಾಯ್ಕ ಅವರನ್ನು ಗೋಕರ್ಣದಿಂದ ಹೊನ್ನಾವರಕ್ಕೆ, ಮಂಜುನಾಥ ಗೌಡ ಅವರನ್ನು ಹಳಿಯಾಳದಿಂದ ಗೋಕರ್ಣಕ್ಕೆ, ಗುರುರತ್ನಾಕರ ನಾಯ್ಕ ಅವರನ್ನು ಕಾರವಾರ ಶಹರದಿಂದ ಕುಮಟಾಕ್ಕೆ ಹಾಗೂ ಅರುಣ ಮೇತ್ರಿ ಅವರನ್ನು ಅಂಕೋಲಾದಿಂದ ಕುಮಟಾಕ್ಕೆ ವರ್ಗಾವಣೆ ಮಾಡಲಾಗಿದೆ. ಇನ್ನುಳಿದಂತೆ ಅಭಿಜಿತ್ ಆರ್‌ಎಲ್ (ಚಿತ್ತಾಕುಲಾದಿಂದ ಸಿದ್ದಾಪುರ), ದಿವ್ಯಾ ನಾಯ್ಕ (ಶಿರಸಿ ಸಂಚಾರದಿಂದ ಕಾರವಾರ ಮಹಿಳಾ ಠಾಣೆ), ಪ್ರೇಮಾನಂದ ನಾಯ್ಕ (ಶಿರಸಿ ಸಂಚಾರದಿಂದ ಕಾರವಾರ ಶಹರ), ಕೋಟೇಶ್ವರ ನಾಗರವಳ್ಳಿ (ಮುಂಡಗೋಡದಿಂದ ಶಿರಸಿ ಎನ್ ಎಮ್), ಲಂಬಾಣಿ ಬಸವರಾಜ (ಮುಂಡಗೋಡದಿಂದ ಹಳಿಯಾಳ), ಜ್ಯೋತಿ ಚವ್ಹಾಣ (ಹಳಿಯಾಳದಿಂದ ಮುಂಡಗೋಡ), ಅಣ್ಣಪ್ಪ ಎಮ್ ನಾಯ್ಕ (ಅಂಬಿಕಾನಗರದಿಂದ ಮುರ್ಡೇಶ್ವರ) ಹಾಗೂ ಕೃಷ್ಣಾ ಕೋಕರೆ ಅವರನ್ನು ಮುರ್ಡೇಶ್ವರದಿಂದ ಅಂಬಿಕಾನಗರಕ್ಕೆ ಸ್ಥಳಾಂತರಿಸಲಾಗಿದೆ.
ಸಂಬಂಧಪಟ್ಟ ಪೊಲೀಸ್ ಠಾಣಾ ಅಧಿಕಾರಿಗಳು ಈ ಎಲ್ಲಾ ಸಿಬ್ಬಂದಿಗಳನ್ನು ತಕ್ಷಣವೇ ಕರ್ತವ್ಯದಿಂದ ಬಿಡುಗಡೆಗೊಳಿಸಬೇಕು ಮತ್ತು ಅವರು ಹೊಸ ಠಾಣೆಯಲ್ಲಿ ವರದಿ ಮಾಡಿಕೊಂಡ ಬಗ್ಗೆ ಪಾಲನಾ ವರದಿಯನ್ನು ಜಿಲ್ಲಾ ಪೊಲೀಸ್ ಕಚೇರಿಗೆ ಸಲ್ಲಿಸಬೇಕು ಎಂದು ಎಸ್‌ಪಿ ಅವರು ಆದೇಶದಲ್ಲಿ ಕಟ್ಟುನಿಟ್ಟಾಗಿ ತಿಳಿಸಿದ್ದಾರೆ.
