ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Crime

ಗೋವಾ ಬೀಚ್‌ನಲ್ಲಿ ಸಿಕ್ಕಿಬಿದ್ದ ಗಾಂಜಾ ಕಿಲಾಡಿ

Pakka News Web • 3 ಜುಲೈ 2026,

ಕಳೆದ ಐದು ವರ್ಷಗಳಿಂದ ಪೊಲೀಸರಿಂದ ತಲೆಮರೆಸಿಕೊಂಡಿದ್ದ ಗಾಂಜಾ ಸಾಗಾಟಗಾರ ಹಾಗೂ ಸರಣಿ ಕಳ್ಳತನದ ಆರೋಪಿ ಕೊನೆಗೂ ಶಿರಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಗೋವಾದ ಕೊಲ್ವಾ ನಿವಾಸಿಯಾದ ಡೇವಿಡ್ ಜೂಜೆ ಫರ್ನಾಂಡೀಸ್ (28) ಎಂಬಾತನೇ ಈಗ ಕಂಬಿ ಎಣಿಸುತ್ತಿರುವ ಕಿಲಾಡಿ. ಈತನನ್ನು ಶಿರಸಿ ಮಾರುಕಟ್ಟೆ ಪೊಲೀಸರು ಗೋವಾದಲ್ಲೇ ಖೆಡ್ಡಾಕ್ಕೆ ಕೆಡವಿ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.

ಆರೋಪಿ ಡೇವಿಡ್ ಕೇವಲ ಗಾಂಜಾ ಪ್ರಕರಣ ಅಷ್ಟೇ ಅಲ್ಲದೆ, ಶಿರಸಿ ನಗರ ಮತ್ತು ಮಾರುಕಟ್ಟೆ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ಹಲವು ಕಳ್ಳತನ ಪ್ರಕರಣಗಳಲ್ಲೂ ಬೇಕಾಗಿದ್ದ ಪ್ರಮುಖ ಆರೋಪಿಯಾಗಿದ್ದ. ವರ್ಷಗಳಿಂದ ಪೊಲೀಸರಿಂದ ತಪ್ಪಿಸಿಕೊಂಡು ಅಲೆಯುತ್ತಿದ್ದ ಈತನ ಬಗ್ಗೆ ನಿಖರ ಮಾಹಿತಿ ಕಲೆಹಾಕಿದ ಪೊಲೀಸರು, ಗುರುವಾರ ಗೋವಾದ ಪ್ರಸಿದ್ಧ ಕೊಲ್ವಾ ಬೀಚ್ ಸಮೀಪ ಹಠಾತ್ ದಾಳಿ ನಡೆಸಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಯನ್ನು ಕಾರವಾರ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಶಿರಸಿ ಸಿಪಿಐ ಸಂಪತ್ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯ ನೇತೃತ್ವವನ್ನು ಮಾರುಕಟ್ಟೆ ಠಾಣೆಯ ಪಿಎಸ್‌ಐ ಬಸವರಾಜ ಕನಶೆಟ್ಟಿ ವಹಿಸಿದ್ದರು. ತಂಡದಲ್ಲಿದ್ದ ಸಿಬ್ಬಂದಿಗಳಾದ ವಿಶ್ವನಾಥ ಭಂಡಾರಿ, ಖಾದರಗಾಡಿ ಹಾಗೂ ಅಶೋಕ ಹರಿಕಂತ್ರ ಅವರ ಚಾಣಾಕ್ಷ ನಡೆ ಈ ದೀರ್ಘಕಾಲದ ಹುಡುಕಾಟಕ್ಕೆ ಬಿಗ್ ಬ್ರೇಕ್ ಹಾಕಿದೆ.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250