ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Crime

ಪೊಲೀಸರ ಮಿಂಚಿನ ದಾಳಿ; ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಹಳೇ ಖದೀಮ ಅರೆಸ್ಟ್!

Pakka News Web • 16 ಜುಲೈ 2026,

ಶಿರಸಿ ನಗರದಲ್ಲಿ ಅಕ್ರಮ ಮಾದಕ ದ್ರವ್ಯ ಜಾಲದ ವಿರುದ್ಧ ಪೊಲೀಸರು ತಮ್ಮ ಸದ್ದಿಲ್ಲದ ಕಾರ್ಯಾಚರಣೆಯನ್ನು ಮುಂದುವರಿಸಿದ್ದು, ಗಾಂಜಾ ಸಾಗಾಟ ಹಾಗೂ ಮಾರಾಟದಲ್ಲಿ ತೊಡಗಿದ್ದ ಕುಖ್ಯಾತ ಆರೋಪಿಯೊಬ್ಬನನ್ನು  ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ನಗರದ ಬನವಾಸಿ ರಸ್ತೆಯ ಹಾರ್ಟಿಕಲ್ಚರ್ ಕಾಲೇಜು ಸಮೀಪ ಈತ ಇರುವಿಕೆ ಬಗ್ಗೆ, ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಶಿರಸಿ ನಗರ ಠಾಣೆಯ ಪೊಲೀಸರು ಆರೋಪಿಯನ್ನು ಕಾರು ಸಮೇತ ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಯನ್ನು ಹಾವೇರಿ ಜಿಲ್ಲೆಯ ನವನಗರ ಮೂಲದವನಾಗಿದ್ದು, ಪ್ರಸ್ತುತ ದಾಸನಕೊಪ್ಪದಲ್ಲಿ ವಾಸವಿದ್ದ ಇಮ್ರಾನ್ ಅಹ್ಮದ್ (29) ಎಂದು ಗುರುತಿಸಲಾಗಿದೆ. ಕಾಲೇಜು ಪರಿಸರದಲ್ಲೇ ಈ ದಂಧೆ ನಡೆಯುತ್ತಿದ್ದ ಮಾಹಿತಿ ಪಡೆದ ತನಿಖಾ ತಂಡ, ಅತ್ಯಂತ ಚಾಣಾಕ್ಷತನದಿಂದ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಕೋಳ ತೊಡಿಸಿದೆ. ಬಂಧಿತನಿಂದ ಸುಮಾರು 20 ಸಾವಿರ ರೂಪಾಯಿ ಮೌಲ್ಯದ 253 ಗ್ರಾಂ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಲಾಗಿದ್ದ ಅಂದಾಜು 1 ಲಕ್ಷ ರೂಪಾಯಿ ಮೌಲ್ಯದ ಹುಂಡೈ ಐ10 ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

 ಈ ಕಾರ್ಯಾಚರಣೆಯ ಬೆನ್ನಲ್ಲೇ ಆರೋಪಿಯ ಹಿನ್ನೆಲೆಯನ್ನು ಕೆದಕಿದ ಪೊಲೀಸರಿಗೆ ಆಘಾತಕಾರಿ ವಿಷಯಗಳು ಬೆಳಕಿಗೆ ಬಂದಿವೆ. ಬಂಧಿತ ಇಮ್ರಾನ್ ಅಹ್ಮದ್ ಕೇವಲ ಗಾಂಜಾ ವ್ಯಾಪಾರಿಯಷ್ಟೇ ಅಲ್ಲ, ಆತ ಒಬ್ಬ ವೃತ್ತಿಪರ ಅಪರಾಧಿಯಾಗಿದ್ದಾನೆ. ಈತನ ವಿರುದ್ಧ ಈಗಾಗಲೇ ಮುಂಡಗೋಡ ಠಾಣೆಯಲ್ಲಿ ಎರಡು ಗಾಂಜಾ ಸಾಗಾಟ ಪ್ರಕರಣಗಳು, ಅಂಕೋಲಾ ಠಾಣೆಯಲ್ಲಿ ಮನೆ ಕಳ್ಳತನ ಹಾಗೂ ಹಾನಗಲ್ ಪೊಲೀಸ್ ಠಾಣೆಯಲ್ಲಿ ದರೋಡೆಯಂತಹ ಗಂಭೀರ ಪ್ರಕರಣಗಳು ದಾಖಲಾಗಿವೆ.

ಸದ್ಯ ಆರೋಪಿಯ ವಿರುದ್ಧ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ (NDPS) ಕಾಯ್ದೆಯಡಿ ಕಠಿಣ ಮೊಕದ್ದಮೆ ದಾಖಲಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ ಬೆನ್ನಲ್ಲೇ ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಜಿಲ್ಲಾ ಪೊಲೀಸ್ ಅಧೀಕ್ಷಕರ ಸಮರ್ಥ ಮಾರ್ಗದರ್ಶನದಲ್ಲಿ ನಡೆದ ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಶಿರಸಿ ನಗರ ಠಾಣೆಯ ಪೊಲೀಸ್ ಅಧಿಕಾರಿಗಳು ಹಾಗೂ ಅಪರಾಧ ವಿಭಾಗದ ಸಿಬ್ಬಂದಿ ಪ್ರಮುಖ ಪಾತ್ರ ವಹಿಸಿದ್ದರು.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250