ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Crime

ಮದ್ಯ ಮಾರಾಟ: ಇಬ್ಬರ ವಿರುದ್ಧ ಪ್ರಕರಣ

Pakka News Web • 21 ಜುಲೈ 2026,

​ಅಂಕೋಲಾ:ತಾಲೂಕಿನ ಕುಂಟಕಣಿ ಕ್ರಾಸ್ ಬಳಿ ಸಾರ್ವಜನಿಕ ರಸ್ತೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಚವೆ ಮಾಬಗಿಯ ಕಿರಾಣಿ ವ್ಯಾಪಾರಿ ಚೇತನ ಶಿವಾನಂದ ನಾಯಕ (23) ಹಾಗೂ ಅಚವೆ ಕುಂಟಕಣಿಯ ಲತೀಶ ನಾಗರಾಜ ನಾಯಕ (30) ಬಂಧಿತ ಆರೋಪಿಗಳು.

​ಆರೋಪಿಗಳು ಯಾವುದೇ ಪರವಾನಗಿ ಇಲ್ಲದೆ ಅಂಕೋಲಾದ ಮದ್ಯದ ಅಂಗಡಿಯಿಂದ ಸರಾಯಿ ಪ್ಯಾಕೆಟ್ ಹಾಗೂ ಬಾಟಲಿಗಳನ್ನು ಖರೀದಿಸಿ, ರವಿವಾರ ರಾತ್ರಿ ಕುಂಟಕಣಿ ಕ್ರಾಸ್ ಬಳಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಪಿಎಸ್‌ಐ ಗುರುನಾಥ ಹಾದಿಮನಿ ಅವರ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿದೆ. ಈ ವೇಳೆ ಆರೋಪಿಗಳಿಂದ 15,065 ರೂ. ಮೌಲ್ಯದ ಮದ್ಯವನ್ನು ಜಪ್ತಿ ಮಾಡಲಾಗಿದೆ.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250