ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Crime

ಕಾಡಿನಲ್ಲಿ ಇಸ್ಪೀಟ್ ಅಡ್ಡೆ ಪೊಲೀಸರ ದಾಳಿ!

Pakka News Web • 24 ಜುಲೈ 2026,

ಪವಿತ್ರ ದೇವಾಲಯದ ಸಮೀಪದ ಅರಣ್ಯ ಪ್ರದೇಶವನ್ನು ಜೂಜಾಟದ ತಾಣವನ್ನಾಗಿ ಮಾಡಿಕೊಂಡಿದ್ದ ಅಡ್ಡಗಸಿಗರ ಮೇಲೆ ಪೊಲೀಸರು ಖಚಿತ ಮಾಹಿತಿ ಮೇರೆಗೆ ಮಿಂಚಿನ ದಾಳಿ ನಡೆಸಿದ್ದಾರೆ. ಅಂಕೋಲಾ ತಾಲೂಕಿನ ಆಂದ್ರೆ ಅರಣ್ಯ ಪ್ರದೇಶದಲ್ಲಿರುವ ಶ್ರೀ ಹುಲಿಯಮ್ಮ ದೇವಸ್ಥಾನದ ಹತ್ತಿರ ಅಕ್ರಮವಾಗಿ ಇಸ್ಪೀಟ್ ಆಡುತ್ತಿದ್ದ ತಂಡವನ್ನು ಸುತ್ತುವರಿದ ಪೊಲೀಸರು ಮೂವರನ್ನು ಸ್ಥಳದಲ್ಲೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಆದರೆ, ದಾಳಿಯ ವಾಸನೆ ಅರಿತ ಮತ್ತಿಬ್ಬರು ಕಾಡಿನ ಹಾದಿ ಹಿಡಿದು ಪರಾರಿಯಾಗಿದ್ದಾರೆ. ಆಂದ್ರೆ ತೆನೆಬೊಳೆಯ ಮಹಾಬಲೇಶ್ವರ ತುಳಸು ಗೌಡ (50), ನಾಗರಾಜ ನಾರಾಯಣ ನಾಯಕ (50) ಹಾಗೂ ಬಳಲೆ ಪೆಟ್ರೋಲ್ ಪಂಪ್ ನಿವಾಸಿ ದೇವರಾಜ ನಾರಾಯಣ ನಾಯ್ಕ (24) ಬಂಧಿತ ಆರೋಪಿಗಳಾಗಿದ್ದಾರೆ.

ದಾಳಿ ವೇಳೆ ಪೋಲಿಸರು ಜೂಜಾಟಕ್ಕೆ ಪಣವಾಗಿಟ್ಟಿದ್ದ 2,130 ನಗದು ಹಾಗೂ 52 ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ಘಟನಾ ಸ್ಥಳದಿಂದ ಕಾಲ್ಕಿತ್ತ ತೆನೆಬೊಳೆಯ ಗುರು ಹೊನ್ನಾ ಗೌಡ ಮತ್ತು ಸುರೇಶ ಅನಂತ ಗೌಡ ಅವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಈ ಕುರಿತು ಪಿಎಸ್‌ಐ ಸುನೀಲ ಹುಲ್ಲೋಳ್ಳಿ ಅವರು ನ್ಯಾಯಾಲಯದಿಂದ ಅಗತ್ಯ ಅನುಮತಿ ಪಡೆದುಕೊಂಡು, ಪ್ರಕರಣ ದಾಖಲಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250