ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Crime

ಅಭಯಾರಣ್ಯದಲ್ಲಿ ಸಾಹಸ: ಐವರ ವಿರುದ್ಧ ಕೇಸ್!

Pakka News Web • 25 ಜುಲೈ 2026,

ಸಾಹಸದ ಭರದಲ್ಲಿ ನಿರ್ಬಂಧಿತ ಅರಣ್ಯ ಪ್ರದೇಶ ಹೊಕ್ಕಿ, ಜೀವದ ಹಂಗು ತೊರೆದು ಜಲಪಾತ ಹತ್ತಿದ ಐವರು ಯುವಕರು ಈಗ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹೊನ್ನಾವರದ ಗೇರುಸೊಪ್ಪ ಅಭಯಾರಣ್ಯದ ಅತ್ಯಂತ ಅಪಾಯಕಾರಿ ಹಾಗೂ ಅಪರೂಪದ ಸಿಂಗಳೀಕಗಳು ವಾಸಿಸುವ ಸೂಕ್ಷ್ಮ ವಲಯದಲ್ಲಿರುವ ‘ಕನ್ನಿಕಾ ಜಲಪಾತ’ವನ್ನು ಏರಿದ್ದ ಐವರು ಅಪರಿಚಿತ ಯುವಕರು, ಅಲ್ಲಿ ತೆಗೆಸಿಕೊಂಡ ಫೋಟೋಗಳನ್ನು ‘ಲೋಕಲ್ ಮ್ಯಾಪ್ಸ್‌’ ಎಂಬ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದ್ದರು. ಅಪಾಯಕಾರಿ ಸ್ಥಳಕ್ಕೆ ತೆರಳಿ ಜೀವಕ್ಕೆ ಕಂಟಕ ತಂದೊಡ್ಡಿಕೊಂಡಿದ್ದಲ್ಲದೆ, ಆ ಜಾಗದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಇತರರನ್ನೂ ಪ್ರಚೋದಿಸಿದ ಆರೋಪ ಇವರ ಮೇಲಿದೆ.

ಮಳೆಗಾಲದಲ್ಲಿ ಇಂತಹ ಅಪಾಯಕಾರಿ ಜಲಪಾತ ಹಾಗೂ ಕಣಿವೆಗಳಿಗೆ ತೆರಳದಂತೆ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಕಟ್ಟುನಿಟ್ಟಿನ ನಿರ್ಬಂಧ ಹೇರಿದ್ದರೂ ಅದನ್ನು ಉಲ್ಲಂಘಿಸಲಾಗಿದೆ. ಈ ಹಿನ್ನೆಲೆಯಲ್ಲಿ ಗೇರುಸೊಪ್ಪ ಉಪ ವಲಯ ಅರಣ್ಯಾಧಿಕಾರಿ ಬಾಲಕೃಷ್ಣ ಇ. ನಾಯ್ಕ ಅವರು ನೀಡಿದ ದೂರಿನನ್ವಯ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.‌ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250