ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Crime

ದೇವಸ್ಥಾನವೂ ಸೇರಿ ಸರಣಿ ಕಳ್ಳತನ, ಗ್ರಾಮಸ್ಥರಲ್ಲಿ ಆತಂಕ!

Pakka News Web • 8 ಆಗಸ್ಟ್ 2026,

ಮುಂಡಗೋಡ ತಾಲೂಕಿನ ಕರಗಿನಕೊಪ್ಪ ತಾಂಡಾದ ಜನರ ಆರಾಧ್ಯ ದೈವ ಶ್ರೀ ಸಂತ ಸೇವಾಲಾಲ್ ದೇವಸ್ಥಾನದ ಬೀಗ ಮುರಿದ ಖದೀಮರು, ಲಕ್ಷಾಂತರ ರೂಪಾಯಿ ಹಣವಿದ್ದ ಕಾಣಿಕೆ ಹುಂಡಿಯನ್ನೇ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ. 

ಇದರ ಜೊತೆಗೆ ನ ತಡರಾತ್ರಿ ತಾಲೂಕಿನ ಮತ್ತೂ ಎರಡು ಕಡೆಗಳಲ್ಲಿ ಕಳವು ನಡೆದಿದ್ದು, ಸರಣಿ ಕಳ್ಳತನದಿಂದಾಗಿ ಸಾರ್ವಜನಿಕರಲ್ಲಿ ತೀವ್ರ ಕಳವಳ ವ್ಯಕ್ತವಾಗಿದೆ.

ದೇವಸ್ಥಾನದ ಬಾಗಿಲ ಬೀಗ ಮುರಿದು ಒಳನುಗ್ಗಿದ ಕಳ್ಳರು, ಹುಂಡಿಯಲ್ಲಿದ್ದ ಸರಿಸುಮಾರು ಒಂದೂವರೆ ಲಕ್ಷ ರೂಪಾಯಿ ನಗದು ಹಣವನ್ನು ಬರಿದು ಮಾಡಿದ್ದಾರೆ. ಇದೇ ರಾತ್ರಿ ನಂದಿಪುರದ ಶ್ರೀನಿವಾಸ ಎಂಬುವವರ ಅಂಗಡಿ ಹಾಗೂ ಬಾಚಣಕಿಯ ಕರಿಯಮ್ಮ ದೇವಿ ದೇವಸ್ಥಾನದಲ್ಲೂ ಕಳ್ಳತನ ನಡೆದಿದ್ದು, ಖದೀಮರು ಸರಣಿಯಾಗಿ ಕೈಚಳಕ ತೋರಿಸಿದ್ದಾರೆ.

ಗ್ರಾಮಸ್ಥರ ನಂಬಿಕೆಯ ಕೇಂದ್ರವಾಗಿರುವ ದೇವಸ್ಥಾನದಲ್ಲೇ ಈ ರೀತಿ ಕಳವಾಗಿರುವುದು ಸ್ಥಳೀಯರಲ್ಲಿ ಭೀತಿ ಹಾಗೂ ಆತಂಕವನ್ನುಂಟುಮಾಡಿದೆ. ವಿಷಯ ತಿಳಿಯುತ್ತಿದ್ದಂತೆಯೇ ಮುಂಡಗೋಡ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳ್ಳರ ಪತ್ತೆಗೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250