ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Crime

ಗೋವಾ ಮದ್ಯ ಸಾಗಾಟ: ಹುಬ್ಬಳ್ಳಿ ವ್ಯಕ್ತಿ ಬಂಧನ

Pakka News Web • 28 ಆಗಸ್ಟ್ 2026,

ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಆರೋಪದ ಮೇಲೆ ಹುಬ್ಬಳ್ಳಿ ಮೂಲದ ವ್ಯಕ್ತಿಯೊಬ್ಬನನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಜೊಯಿಡಾ ತಾಲೂಕಿನ ಅನಮೋಡ ಜಂಟಿ ತನಿಖಾ ಠಾಣೆಯಲ್ಲಿ ವಶಕ್ಕೆ ಪಡೆದಿದ್ದಾರೆ. ಆರೋಪಿ ಸಾಗಾಟಕ್ಕೆ ಬಳಸಿದ್ದ ಸ್ಕೂಟರ್‌ ಸೇರಿದಂತೆ ಅಕ್ರಮ ಮದ್ಯವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಹುಬ್ಬಳ್ಳಿಯ ಗದಗ ರಸ್ತೆಯ ವಿನೋಬ ನಗರ ನಿವಾಸಿ ನವೀನ್ ಚೆನ್ನಯ್ಯ ದಾರ ವಶಕ್ಕೆ ಪಡೆದ ವ್ಯಕ್ತಿ.

ಶುಕ್ರವಾರ ಅನಮೋಡ ತನಿಖಾ ಠಾಣೆಯಲ್ಲಿ ಅಬಕಾರಿ ಅಧಿಕಾರಿಗಳು ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಗೋವಾ ಕಡೆಯಿಂದ ಬಂದ ಹೋಂಡಾ ಆಕ್ಟಿವಾ ಸ್ಕೂಟರ್‌ನ್ನು ತಡೆದು ಪರಿಶೀಲಿಸಿದಾಗ, ಎರಡು ದೊಡ್ಡ ಏರ್‌ಬ್ಯಾಗ್‌ಗಳಲ್ಲಿ ವಿವಿಧ ಬ್ರ್ಯಾಂಡ್‌ಗಳ ಗೋವಾ ನಿರ್ಮಿತ ಮದ್ಯ ಪತ್ತೆಯಾಗಿದೆ.

ಒಟ್ಟು 28.25 ಲೀಟರ್ ಮದ್ಯವನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಪ್ತಿ ಮಾಡಲಾದ ಮದ್ಯದ ಅಂದಾಜು ಮೌಲ್ಯ ₹16,500 ಆಗಿದ್ದು, ಸಾಗಾಟಕ್ಕೆ ಬಳಸಿದ್ದ ಸ್ಕೂಟರ್‌ನ ಮೌಲ್ಯ ಸುಮಾರು ₹60,000 ಎಂದು ಅಬಕಾರಿ ಇಲಾಖೆ ತಿಳಿಸಿದೆ.

ಅಬಕಾರಿ ಉಪ ಅಧೀಕ್ಷಕರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕ ಮಹೇಂದ್ರ ಎಸ್. ನಾಯ್ಕ್, ಮುಖ್ಯ ಪೇದೆಗಳಾದ ಸಂತೋಷ್ ಸುಬ್ಬಣ್ಣವರ್ ಹಾಗೂ ಅಲ್ಲಿ ಸಾಬ್ ಅವರಾದಿ ಮತ್ತು ಪೇದೆ ಗಜಾನನ್ ನಾಯ್ಕ ಭಾಗವಹಿಸಿದ್ದರು. ದಾಂಡೇಲಿ ವಲಯದ ಅಬಕಾರಿ ಉಪನಿರೀಕ್ಷಕ ಕರೆಪ್ಪ ಹೊಳೆನವರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250