ಅಕ್ಟೋಬರ್ 25, 2026
ಭಾನುವಾರ

ನಮ್ಮನ್ನು ಅನುಸರಿಸಿ

Crime

ಮಾರಣಾಂತಿಕ ಹಲ್ಲೆ: ಆರೋಪಿಯ ಬಂಧನ

Pakka News Web • 29 ಸೆಪ್ಟೆಂ 2026,


ಕಾರವಾರ: ಚಿತ್ತಾಕುಲ ಪೊಲೀಸ್ ಠಾಣೆ ವ್ಯಾಪ್ತಿಯ ಅಂಗಡಿ ಗ್ರಾಮದಲ್ಲಿ ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಕಾನೂನು ಸಂಘರ್ಷಕ್ಕೊಳಗಾದ ಬಾಲಕನೊಬ್ಬ ಚೇಷ್ಟೆ ಮಾಡಿದ್ದಕ್ಕೆ ಬುದ್ಧಿವಾದ ಹೇಳಲು ಹೋದವರ ಮೇಲೆ ಕತ್ತಿಯಿಂದ ಮಾರಣಾಂತಿಕ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಸ್ನೋಟಿಯ ಭಗವತವಾಡದ ನಿವಾಸಿ ದೀಪಕ (41) ಬಂಧಿತ ಆರೋಪಿ. ಗಣೇಶ ಮೂರ್ತಿ ವಿಸರ್ಜನೆ ವೇಳೆ ಬಾಲಕನೊಬ್ಬ ಚೇಷ್ಟೆ ಮಾಡಿದ್ದ ಹಾಗೂ ಸಿದ್ಧಾರ್ಥ  ಗೋಸಾವಿ ಅವರ ಸ್ನೇಹಿತ ಸಾಯಿಸನತ್ ಎಂಬಾತನೊಂದಿಗೆ ಜಗಳವಾಡಿದ್ದ. ಈ ಕುರಿತು ಬಾಲಕನ ಪೋಷಕರಿಗೆ ತಿಳಿಸಿ ಬುದ್ಧಿವಾದ ಹೇಳುವ ಉದ್ದೇಶದಿಂದ ದೂರುದಾರ ರೋಷನ್ ನಾಯ್ಕ, ಅವರ ಸ್ನೇಹಿತ ಸಿದ್ಧಾರ್ಥ  ಗೋಸಾವಿ ಹಾಗೂ ಇತರರು ಸೆ.26ರಂದು ಸಂಜೆ ಅಸ್ನೋಟಿಯ ಭಗವತವಾಡದಲ್ಲಿರುವ ಬಾಲಕನ ಮನೆಗೆ ಹೋಗಿದ್ದರು. ಈ ವೇಳೆ ಆಪಾದಿತ ಬಾಲಕನ ತಂದೆ ದೀಪಕ ಹಾಗೂ ಬಾಲಕ ಸೇರಿ ಫಿರ್ಯಾದಿದಾರರು ಮತ್ತು ಅವರ ಸ್ನೇಹಿತನ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದರು. ಈ ಕುರಿತು ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಸ್ಥಳೀಯ ಮಾಹಿತಿಯನ್ನಾಧರಿಸಿ ಪೊಲೀಸರು ಸೆಪ್ಟೆಂಬರ್ 27ರಂದು ಆರೋಪಿ ದೀಪಕ್ ನಾಯ್ಕನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಬಾಲ ನ್ಯಾಯ ಮಂಡಳಿ ಮುಂದೆ ಹಾಜರುಪಡಿಸಲಾಗಿದೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250