ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Trending

ಸಮುದ್ರಕ್ಕೆ ಧುಮುಕಿದ ಮಾನಸಿಕ ಅಸ್ವಸ್ಥ!

Pakka News Web • 17 ಜುಲೈ 2026,

ಕಾರವಾರ:ನಗರದ ಪ್ರಸಿದ್ಧ ಟಾಗೋರ್ ಕಡಲ ತೀರದಲ್ಲಿ ತೀವ್ರ ಕಡಲ ಅಲೆಗಳ ನಡುವೆ ಸಿಲುಕಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬನನ್ನು ಕರಾವಳಿ ಕಾವಲು ಪಡೆಯ ಪೊಲೀಸರು ಅತ್ಯಂತ ಸಾಹಸಿಕವಾಗಿ ರಕ್ಷಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ರಕ್ಷಣಾ ಕಾರ್ಯಚರಣೆಯ ವಿಡಿಯೋ ನೋಡಿ

ಉತ್ತರ ಕನ್ನಡ ಜಿಲ್ಲೆಯ ಕಾರವಾರ ಭಾಗದಲ್ಲಿ ಸದ್ಯ ಭಾರಿ ಮಳೆಯಾಗುತ್ತಿದ್ದು, ಸಮುದ್ರದಲ್ಲಿ ಅಲೆಗಳ ಅಬ್ಬರ ಎಂದಿಗಿಂತಲೂ ಹೆಚ್ಚಾಗಿದೆ. ಇಂತಹ ಅಪಾಯಕಾರಿ ಪರಿಸ್ಥಿತಿಯಲ್ಲೂ ತೀರದಲ್ಲಿದ್ದ ಮಾನಸಿಕ ಅಸ್ವಸ್ಥನೊಬ್ಬ ಯಾರಿಗೂ ತಿಳಿಯದಂತೆ ಕಡಲಿಗೆ ಇಳಿದಿದ್ದಾನೆ. ಅಲೆಗಳ ಭೀಕರ ಸೆಳೆತಕ್ಕೆ ಸಿಲುಕಿದ ಆತ, ನೋಡನೋಡುತ್ತಿದ್ದಂತೆ ಸಮುದ್ರದ ಮಧ್ಯಭಾಗಕ್ಕೆ ಕೊಚ್ಚಿಹೋಗಿ ಮುಳುಗಲಾರಂಭಿಸಿದ್ದನು.

 ಸ್ಥಿತಿಯ ಗಂಭೀರತೆಯನ್ನು ತಕ್ಷಣವೇ ಅರಿತ ಕರಾವಳಿ ಕಾವಲು ಪಡೆಯ ಪೊಲೀಸರು, ಸಮಯಪ್ರಜ್ಞೆ ಮೆರೆದು ಮಿಂಚಿನ ವೇಗದಲ್ಲಿ ಕಾರ್ಯಪ್ರವೃತ್ತರಾದರು. ರಕ್ಷಣಾ ಬೋಟ್ ಮೂಲಕ ಭೋರ್ಗರೆಯುತ್ತಿದ್ದ ಅಲೆಗಳನ್ನು ಸೀಳಿ ಸಮುದ್ರದ ಮಧ್ಯಕ್ಕೆ ಧಾವಿಸಿದ ಸಿಬ್ಬಂದಿ, ಮುಳುಗುತ್ತಿದ್ದ ವ್ಯಕ್ತಿಯನ್ನು ಅತ್ಯಂತ ಯಶಸ್ವಿಯಾಗಿ ರಕ್ಷಿಸಿದ್ದಾರೆ. ಪ್ರಾಣದ ಹಂಗು ತೊರೆದು ಆಪದ್ಬಾಂಧವರಂತೆ ಧಾವಿಸಿ, ಯಶಸ್ವಿ ಕಾರ್ಯಾಚರಣೆ ನಡೆಸಿದ ಕರಾವಳಿ ಕಾವಲು ಪಡೆಯ ಪೊಲೀಸರ ಈ ಸಾಹಸಿಕ ಕಾರ್ಯ ಸಾರ್ವಜನಿಕರ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250