ಉತ್ತರ ಕನ್ನಡ ಜಿಲ್ಲೆಯಲ್ಲಿ ಜುಲೈ 2 ಹಾಗೂ ಜುಲೈ 5 ರಿಂದ ಜುಲೈ 7ರವರೆಗೆ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಹವಾಮಾನ ಇಲಾಖೆಯು ಜಿಲ್ಲೆಯಾದ್ಯಂತ ‘ರೆಡ್ ಅಲರ್ಟ್’ ಘೋಷಿಸಿದೆ. ಗುರುವಾರ ಬೆಳಗಿನಿಂದಲೇ ಕಾರವಾರ ತಾಲೂಕಿನಲ್ಲಿ ಸತತ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ, ಸುರಕ್ಷತಾ ಕ್ರಮವಾಗಿ ಕಾರವಾರ ತಾಲೂಕಿನ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಗುರುವಾರ ಕಾರವಾರದ ಕ್ಷೇತ್ರ ಶಿಕ್ಷಣಾಧಿಕಾರಿ ಅವರ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಈ ರಜಾವಧಿಯಿಂದ ಉಂಟಾಗುವ ಕಲಿಕಾ ನಷ್ಟವನ್ನು ಮುಂದಿನ ದಿನಗಳಲ್ಲಿ ಹೆಚ್ಚುವರಿ ಶಾಲೆ ನಡೆಸುವ ಮೂಲಕ ಸರಿದೂಗಿಸಿಕೊಳ್ಳುವಂತೆ ಸೂಚಿಸಲಾಗಿದೆ.
ಸತತ ಮಳೆ ಸುರಕ್ಷತಾ ಕ್ರಮವಾಗಿ ಕಾರವಾರದ ಶಾಲೆಗಳಿಗೆ ರಜೆ ಘೋಷಣೆ
