ಭಾರತ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಹಾಗೂ ಇತರೆ ತೈಲ ಕಂಪನಿಗಳ ನಿರ್ದೇಶನದಂತೆ ಇನ್ನೂ ಇ-ಕೆವೈಸಿ ಪೂರ್ಣಗೊಳಿಸದ ಎಲ್ಪಿಜಿ, ಗ್ರಾಹಕರು ಆಗಸ್ಟ್ 15 ರೊಳಗೆ ತಮ್ಮ ಎಲ್ಪಿಜಿ ಸಂಪರ್ಕಕ್ಕೆ ಸಂಬಂಧಿಸಿದ ಇ-ಕೆವೈಸಿ ಅನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು.
ಇ-ಕೆವೈಸಿ ಪೂರ್ಣಗೊಳಿಸುವುದರಿಂದ ಫಲಾನುಭವಿಗಳ ಮಾಹಿತಿಯ ನಿಖರತೆ ಖಚಿತಪಡಿಸುವುದು, ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ಗಳ ದುರುಪಯೋಗವನ್ನು ತಡೆಗಟ್ಟುವುದು ಹಾಗೂ ಅರ್ಹ ಗ್ರಾಹಕರಿಗೆ ನಿರಂತರ ಎಲ್ಪಿಜಿ ಪೂರೈಕೆ ಖಚಿತಪಡಿಸುವುದು ಸಾಧ್ಯವಾಗುತ್ತದೆ. ಎಲ್ಲಾ ಎಲ್ಪಿಜಿ ವಿತರಕರು ತಮ್ಮ ವ್ಯಾಪ್ತಿಯಲ್ಲಿ ವಿಶೇಷ ಇ-ಕೆವೈಸಿ ಅಭಿಯಾನಗಳನ್ನು ಹಮ್ಮಿಕೊಂಡು, ಶಿಬಿರಗಳ, ಜಾಗೃತಿ ಕಾರ್ಯಕ್ರಮ ಹಾಗೂ ಮನೆ-ಮನೆ ಭೇಟಿ ಕಾರ್ಯಕ್ರಮಗಳನ್ನು ನಡೆಸಬೇಕು.
ವಿಶೇಷವಾಗಿ ವಯೋವೃದ್ಧರು, ಅನಾರೋಗ್ಯ ಪೀಡಿತರು, ದಿವ್ಯಾಂಗರು ಡೀಲರ್ ಕಚೇರಿಗೆ ಸ್ವತಃ ಆಗಮಿಸಲು ಸಾಧ್ಯವಾಗದ ಗ್ರಾಹಕರ ಮನೆಗಳಿಗೆ ತೆರಳಿ ಇ-ಕೆವೈಸಿ ಪೂರ್ಣಗೊಳಿಸಲು ಅಗತ್ಯ ಸಹಾಯ ಮಾಡಬೇಕು.
ನ್ಯಾಯಬೆಲೆ ಅಂಗಡಿಗಳ ಮಾಲೀಕರು ತಮ್ಮ ಅಂಗಡಿಗೆ ಆಗಮಿಸುವ ಪಡಿತರ ಚೀಟಿದಾರರಲ್ಲಿ ಇನ್ನೂ ಇ-ಕೆವೈಸಿ ಪೂರ್ಣಗೊಳಿಸದ ಎಲ್ಪಿಜಿ ಗ್ರಾಹಕರಿಗೆ ಈ ಕುರಿತು ಜಾಗೃತಿ ಮೂಡಿಸಿ, ಸಮೀಪದ ಎಲ್ಪಿಜಿ ವಿತರಕರನ್ನು ಸಂಪರ್ಕಿಸಿ ನಿಗದಿತ ಅವಧಿಯೊಳಗೆ ಇ-ಕೆವೈಸಿ ಪೂರ್ಣಗೊಳಿಸುವಂತೆ ತಿಳಿಸಬೇಕು ಎಂದು ಕಾರವಾರ ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
LPG ಗ್ರಾಹಕರೇ ಆಗಸ್ಟ್ 15ರೊಳಗೆ ಈ ಕೆಲಸ ಮಾಡಿ!
