ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ನಗರದ ಹಳೆದಾಂಡೇಲಿಯ ಮಸೀದಿ ಗಲ್ಲಿಯಲ್ಲಿ ಮನೆಯ ಗೋಡೆ ಕುಸಿದು ಅಪಾರ ಹಾನಿಯಾದ ಘಟನೆ ಸೋಮವಾರ ನಡೆದಿದೆ.
ಮಸೀದಿ ಗಲ್ಲಿಯ ನಿವಾಸಿ ಹಸನ್ ಯೂಸೂಫ್ ಶೇಖ್ ಅವರ ಮನೆಯ ಗೋಡೆ ಮಳೆಗೆ ತಡೆಯಲಾರದೆ ಕುಸಿದಿದೆ. ಇದರಿಂದ ಮನೆಗೆ ತೀವ್ರ ಹಾನಿಯಾಗಿದೆ. ಗೋಡೆ ಕುಸಿದ ವೇಳೆ ಮನೆಯಲ್ಲಿದ್ದ ಇಬ್ಬರು ವೃದ್ಧೆಯರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಘಟನೆಯಲ್ಲಿ ಮನೆ ಹಾಗೂ ಮನೆಯ ಸಾಮಗ್ರಿಗಳು ಸಂಪೂರ್ಣವಾಗಿ ಹಾನಿಗೊಂಡಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
