ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Uttara-Kannada

ಜಿಲ್ಲೆಯ 14 ಗ್ರಾ. ಪಂ. ವ್ಯಾಪ್ತಿಯಲ್ಲಿ ಗ್ರಾಮ ಒನ್ ಕೇಂದ್ರ ಆರಂಭಿಸಲು ಅವಕಾಶ!

Pakka News Web • 4 ಆಗಸ್ಟ್ 2026,

ಉತ್ತರ ಕನ್ನಡ ಜಿಲ್ಲೆಯ 14 ಗ್ರಾಮ ಪಂಚಾಯತ್ ಗಳಲ್ಲಿ ಹೊಸದಾಗಿ ಗ್ರಾಮ ಒನ್ ಕೇಂದ್ರ ಅನುಷ್ಠಾನಗೊಳಿಸಲು ಅವಶ್ಯಕತೆ ಇದ್ದು, ಗ್ರಾಮ ಪಂಚಾಯತ್ ಗಳಲ್ಲಿ ಸಮಗ್ರ ನಾಗರಿಕ ಸೇವೆ ಒದಗಿಸಲು ಗ್ರಾಮ ಒನ್ ಕೇಂದ್ರ ಆರಂಭಿಸಲು ಪ್ರಾಂಚೈಸಿಗಳನ್ನು ಆಹ್ವಾನಿಸಲಾಗಿದೆ.


ಅಂಕೋಲಾ ತಾಲೂಕಿನ ಅಗಸೂರು, ಭಟ್ಕಳ ತಾಲೂಕಿನ ಕೊಪ್ಪ, ದಾಂಡೇಲಿ ತಾಲೂಕಿನ ಆಲೂರ, ಹೊನ್ನಾವರ ತಾಲೂಕಿನ ಕೋಡಣಿ, ಕಾರವಾರ ತಾಲೂಕಿನ ಕೆರವಡಿ, ಕುಮಟಾ ತಾಲೂಕಿನ ಬರ್ಗಿ, ಸಿದ್ದಾಪುರ ತಾಲೂಕಿನ ನಿಲಕುಂದ, ಶಿರಸಿ ತಾಲೂಕಿನ ಸುಗಾವಿ, ಸಾಲ್ಕಣಿ, ಗುಡ್ಡಾಪುರ, ಸೂಪಾ ತಾಲೂಕಿನ ಬಂಜಾರ್ಕುಣಗ, ನಾಗೋಡ್, ಉಳವಿ, ಯಲ್ಲಾಪುರ ತಾಲೂಕಿನ ನಂದೊಳ್ಳಿ ಗ್ರಾಮ ಪಂಚಾಯತ್ ಗಳಲ್ಲಿ ಹೊಸದಾಗಿ ಗ್ರಾಮ ಒನ್ ಕೇಂದ್ರ ಆರಂಭಿಸಲು ಆಸಕ್ತ ಪ್ರಾಂಚೈಸಿಗಳು ಆಗಸ್ಟ್ 15 ರೊಳಗಾಗಿ https://sevasindhuservices.karnataka.gov.in ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ತಹಶೀಲ್ದಾರ್ ಕಚೇರಿ ಸಂಪರ್ಕಿಸುವAತೆ ಅಪರ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250