ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Uttara-Kannada

ಗೃಹ ಜ್ಯೋತಿ ಪುನರ್ ಪರಿಶೀಲನೆ: ದಾಖಲೆ ನೀಡಿ!

Pakka News Web • 12 ಆಗಸ್ಟ್ 2026,

ಕಾರವಾರ ನಗರಸಭೆ ವ್ಯಾಪ್ತಿಗೆ ಒಳ ಪಡುವ ಅರ್ಹ ಉಚಿತ ವಿದ್ಯುತ್ ಫಲಾನುಭವಿಗಳಿಗೆ ಗೃಹ ಜ್ಯೋತಿ ಪುನರ್ ಪರಿಶೀಲನೆ ಜುಲೈ-01 ರಿಂದ ಈಗಾಗಲೆ ಪ್ರಾರಂಭಗೊಂಡಿದೆ.

ಸಮೀಕ್ಷೆಗೆ ಬಂದಾಗ ಅರ್ಹ ಫಲಾನುಭವಿಗಳು ಗೃಹ ಜ್ಯೋತಿ ನೊಂದಣಿಗೆ ಅವಶ್ಯ ಇರುವ ದಾಖಲೆಗಳಾದ ವಿದ್ಯುತ್ ಬಿಲ್, ಆಧಾರ ಸಂಖ್ಯೆ, ಆಧಾರ ಲಿಂಕ್ ಇರುವ ಮೊಬೈಲ್, ವೋಟರ್ ಐಡಿ, ರೇಶನ್ ಕಾರ್ಡ್, ಆದಾಯ ತೆರಿಗೆ ಪಾವತಿದಾರರಿಗೆ ಪಾನ್ ಕಾರ್ಡ್, ಒಂದು ಪಾಸ್ ಪೋರ್ಟ ಸೈಜ್ ಭಾವಚಿತ್ರ ಹಾಗೂ ಬಾಡಿಗೆದಾರರಿಗೆ ರೆಂಟಲ್ ಅಗ್ರಿಮೆಂಟ್ ಒದಗಿಸುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಹೆಸ್ಕಾಂ ಕಚೇರಿಯನ್ನು ಸಂಪರ್ಕಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್(ವಿ), ಕಾರ್ಯ ಮತ್ತು ಪಾಲನಾ ಉಪವಿಭಾಗ, ಹೆಸ್ಕಾಂ, ಕಾರವಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250