ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Uttara-Kannada

ಕಾರವಾರದಲ್ಲಿ ಈದ್ ಮಿಲಾದ್ ಸಂಭ್ರಮ

Pakka News Web • 26 ಆಗಸ್ಟ್ 2026,

ಕಾರವಾರ: ಪವಿತ್ರ ಜಶ್ನೇ ಈದ್ ಮಿಲಾದುನ್ನಬಿ ಪ್ರಯುಕ್ತ ನಗರದ ಸುನ್ನಿ ಮುಸ್ಲಿಂ ಅಸೋಸಿಯೇಷನ್ ವತಿಯಿಂದ ಭವ್ಯ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.

ನಗರದ ಮದೀನಾ ಜಾಮಿಯಾ ಮಸೀದಿಯಿಂದ ಆರಂಭಗೊಂಡ ಮೆರವಣಿಗೆಯು ಹೈಚರ್ಚ್ ರಸ್ತೆ, ಸವಿತಾ ವೃತ್ತ, ಸುಭಾಷ್ ವೃತ್ತ, ಶಿವಾಜಿ ವೃತ್ತ, ಹೂವಿನ ಚೌಕ ಹಾಗೂ ಕಾಜುಬಾಗ್ ಮಾರ್ಗವಾಗಿ ಸಾಗಿ ಅಂತಿಮವಾಗಿ ಪೊಲೀಸ್ ಕಲ್ಯಾಣ ಮಂಟಪವನ್ನು ತಲುಪಿತು.

ಮೆರವಣಿಗೆಯಲ್ಲಿ ನೂರಾರು ಮುಸ್ಲಿಂ ಬಾಂಧವರು, ಸಾರ್ವಜನಿಕರು ಹಾಗೂ ಪುಟಾಣಿ ಮಕ್ಕಳು ಪಾಲ್ಗೊಂಡು ಪ್ರವಾದಿ ಮುಹಮ್ಮದ್ (ಸ.ಅ) ಅವರ ಶಾಂತಿ, ಸೌಹಾರ್ದತೆ ಮತ್ತು ಮಾನವೀಯತೆಯ ಸಂದೇಶಗಳನ್ನು ಸ್ಮರಿಸಿದರು.

ಈ ಸಂದರ್ಭದಲ್ಲಿ ಕಾರವಾರ ಮದೀನಾ ಜಾಮಿಯಾ ಮಸೀದಿಯ ಇಮಾಮ್ ಶಕೀಲ್ ಅನ್ವರ್, ಹಫೀಜ್ ಜುನೈದ್ ರಜಾ, ಸಂಶುದ್ದೀನ್ ನದಾಫ್, ಸುನ್ನಿ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷರಾದ ಮುಭಾಶಿರ್ ಮಾಲ್ಡಿಕ್, ಕಾರ್ಯದರ್ಶಿಗಳಾದ ಆಸಿಫ್ ಶೇಕ್, ಸಲೀಂ ಶೇಕ್, ಫಯಾಜ್ ಶೇಕ್, ಯುವ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಸಂಯೋಜಕ ಸೈಯದ್ ಅಶ್ರಫ್ ಖಾದ್ರಿ, ಪ್ರಮುಖರಾದ ಅಸ್ಲಂ ಬುಖಾರಿ, ಹೈದರ್ ಶೇಕ್, ಇಮ್ತಿಯಾಜ್ ಬುಖಾರಿ, ಮುಝಮ್ಮಿಲ್ ಮಾಲ್ಡಿಕ್, ಎಫ್.ಡಿ. ಶೇಕ್, ಸಮೀರ್ ಶೇಕ್, ನೂರ್ ಖಾನ್, ಅಯೂಬ್ ಖಾನ್, ಮುಬಾಶಿರ್ ಶೇಕ್, ರಶೀದ್ ಶೇಕ್, ಶಫಿ ಶೇಕ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250